ಭೂಮಿ ತಾಯವ್ವ

Author : ಸಂಪಿಗೆ ನಾಗರಾಜ

Pages 132

₹ 140.00
Year of Publication: 2022
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಕಲಬುರಗಿ

Synopsys

‘ಭೂಮಿ ತಾಯವ್ವ’ ಲೇಖಕ ಸಂಪಿಗೆ ನಾಗರಾಜ ಅವರ ಎರಡನೇ ಕಥಾಸಂಕಲನ. ಸಂಪಿಗೆ ನಾಗರಾಜ ಅವರು ಈಗಾಗಲೇ ಕಥೆ, ಪ್ರಬಂಧ, ಕಾದಂಬರಿ ಮತ್ತು ವಿಮರ್ಶೆ ಕ್ಷೇತ್ರಗಳಲ್ಲಿ ಈಗಾಗಲೇ ಕೆಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ನಮ್ಮ ಇತ್ತೀಚಿನ ಕಥಾ ಸಾಹಿತ್ಯ ಕಾರ್ಪೊರೇಟ್ ಸಭಾಂಗಣದ ಜಾಗತೀಕೃತ ವಾತಾವರಣದಲ್ಲಿ ಒದ್ದಾಡುತ್ತಿರುವಂತೆ ಕಾಣುತ್ತಿರುವ ಸಂದರ್ಭದಲ್ಲಿ ಸಂಪಿಗೆ ನಾಗರಾಜ ಅವರ ‘ಭೂಮಿ ತಾಯವ್ವ’ ಸುಳಿಗಾಳಿಯಂತೆ ಬಂದಿದೆ’ ಎನ್ನುತ್ತಾರೆ ವಿಮರ್ಶಕ ಸಿ.ಎಸ್. ಭೀಮರಾಯ.

ಈ ಸಂಕಲನದಲ್ಲಿ ಒಟ್ಟು ಒಂಬತ್ತು ಕಥೆಗಳಿದ್ದು, ಅಪರೂಪವಾಗುತ್ತಿರುವ ಪ್ರಾದೇಶಿಕ ಸೊಗಡಿನೊಂದಿಗೆ ಆಧುನಿಕತೆಯ ಚಿಂತನೆಯ ಎಳೆಗಳೂ ಸೇರಿಕೊಂಡ ಬದುಕಿನ ಒಂದು ದಟ್ಟ ನೇಯ್ಗೆಯನ್ನು ನಾವು ಇಲ್ಲಿ ಕಾಣುತ್ತೇವೆ. ಇಲ್ಲಿ ಬದುಕಿನ ಸೆಲೆ ಸಮೃದ್ಧವಾಗಿದೆ.

ವರ್ತಮಾನದ ಸಮಾಜದಲ್ಲಿ ಕಾಣಸಿಗುವ ಭ್ರಷ್ಟವ್ಯವಸ್ಥೆ, ಜಾತೀಯತೆ, ಮನುಷ್ಯನ ದುಷ್ಟತನ, ಆಕ್ರಮಣ, ಅವಮಾನ, ಕೇಡು, ಹಾದರ, ಕೌಟುಂಬಿಕ ವಿಘಟನೆ, ಗಣಿಗಾರಿಕೆ, ವಲಸೆ, ಬಡತನ, ಮೌಲ್ಯಗಳ ನಾಶ, ಆಧ್ಯಾತ್ಮಿಕತೆ, ಬರಗಾಲ-ಇತ್ಯಾದಿ ಇಲ್ಲಿನ ಕಥೆಗಳ ವಸ್ತು.

About the Author

ಸಂಪಿಗೆ ನಾಗರಾಜ

ಲೇಖಕ ಸಂಪಿಗೆ ನಾಗರಾಜ ಅವರು ಮೂಲತಃ ಬಳ್ಳಾರಿ ತಾಲ್ಲೂಕಿನ ದಾಸರ ನಾಗೇನಹಳ್ಳಿಯವರು. ಬಾಲ್ಯದಿಂದಲೇ ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಂಡವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರ್ಣಗೊಳಿಸಿ, ನಂತರ ಪದವಿ ಶಿಕ್ಷಣವನ್ನು ಬಳ್ಳಾರಿಯಲ್ಲಿ, . ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ.  `ಖಾಲಿ ಕಣ್ಣಿನ ನಾನು' (ಕತಾ ಸಂಕಲನ), 20ನೇ ಶತಮಾನದ ಕೊನೆಯ ದಶಕಗಳಲ್ಲಿ ಸಂಸ್ಕೃತಿ ಪ್ರಶ್ನೆ (ಸಣ್ಣಕತೆಗಳನ್ನು ಆಧರಿಸಿ) ಸಂಶೋಧನಾ ಕೃತಿಗಳು ಕೂಡ ಬೆಳಕು ಕಂಡಿವೆ.   ಸದ್ಯ ಬಳ್ಳಾರಿಯ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ವೇದಾವತಿ ತೀರದಲ್ಲಿ’ ಅವರ ...

READ MORE

Related Books