50 ಬದುಕು ಬದಲಿಸುವ ಕಥೆಗಳು

Author : ರಾಜಮ್ಮ ಡಿ. ಕೆ.

Pages 120

₹ 120.00




Year of Publication: 2021
Published by: ಸಾವಣ್ಣ ಎಂಟರ್ ಪ್ರೈಸಸ್
Address: #12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ, 1ನೇ ಬ್ಲಾಕ್ ಪೂರ್ವ , ಬೆಂಗಳೂರು -560011
Phone: 9036312786

Synopsys

`50 ಬದುಕು ಬದಲಿಸುವ ಕಥೆಗಳು’ ಕೃತಿಯು ರಾಜಮ್ಮ ಡಿ. ಕೆ ಅವರ ಕತಾಸಂಕಲನವಾಗಿದೆ. ಇಲ್ಲಿನ ಕತೆಗಳು ಜೀವನಕ್ಕೆ ಸ್ಫೂರ್ತಿ ನೀಡಬಲ್ಲ ಕತಾ ವಸ್ತುಗಳನ್ನು ಒಳಗೊಂಡಿದೆ. ಲೇಖಕಿ ರಾಜಮ್ಮ ಹೇಳುವಂತೆ, ಹಸನಾದ ಬದುಕಿಗೆ, ಬದುಕು ಬದಲಿಸಿಕೊಳ್ಳುವ ದಿಕ್ಕಿನಡೆಗೆ ಬೇಕಾದ ಸ್ಫೂರ್ತಿಯನ್ನು ಪಡೆಯಲು ವಸ್ತು ಅಥವಾ ವಿಷಯ ಇಂತಹುದೇ ಆಗಿರಬೇಕೆಂಬ ಕಟ್ಟುಪಾಡೇನಿಲ್ಲ. ಮಹಾತ್ಮರ ಜೀವನದ ಸ್ಫೂರ್ತಿದಾಯಕ ಪ್ರಸಂಗಗಳು, ವಾಟ್ಸಾಪ್ ಸಂದೇಶಗಳು, ಆಡಿಯೋ ವಿಡಿಯೋ ತುಣುಕುಗಳು, ಕೇಳಿದ, ನೋಡಿದ ಘಟನೆಗಳು, ನಿತ್ಯ ಜೀವನದಲ್ಲಿ ನಡೆಯುವ ಆಗುಹೋಗುಗಳು, ಭೇಟಿಮಾಡುವ ವ್ಯಕ್ತಿಗಳು, ಭಾಗವಹಿಸುವ ಸಭೆ ಸಮಾರಂಭಗಳು, ಹಿರಿಯರ ಅನುಭವದ ನುಡಿಮುತ್ತುಗಳು ಹೀಗೆ ಯಾವುದೇ ಮೂಲಗಳಿಂದ ಹರಿದುಬರುವ ಒಳ್ಳೆಯ ವಿಚಾರಗಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಲು ಪ್ರೇರಣೆ ನೀಡಬಲ್ಲವು. ಹೊಸ ದಿಕ್ಕಿನೆಡೆಗೆ, ಹೊಸ ಹೊಸ ಸಾಧ್ಯತೆಗಳ ಕಡೆಗೆ ಯೋಚಿಸಲು ಸಹಕಾರಿಯಾಗಬಹುದು. ಈಗಿರುವುದಕ್ಕಿಂತ ಇನ್ನೂ ಹೆಚ್ಚಿನದನ್ನು ಸಾಧಿಸಲು, ಕಠಿಣ ಪರಿಸ್ಥಿತಿಗಳಿಂದ ಹೊರಬರಲು, ಸವಾಲುಗಳನ್ನು ಎದುರಿಸಲು ಅವಕಾಶಗಳನ್ನು ದುಡಿಸಿಕೊಳ್ಳಲು, ಅಂದು ಕೊಂಡ ಕಾರ್ಯವನ್ನು ಯಶಸ್ವಿ ಯಾಗಿ ನಿರ್ವಹಿಸಲು, ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು, ಬದುಕಿನ ಉದ್ದೇಶವನ್ನು ನೆನಪಿಸಿಕೊಳ್ಳಲು ಅವಶ್ಯಕವಾಗಿ ಬೇಕಾದ ಸಾಮಗ್ರಿಗಳಾಗಬಲ್ಲವು ಎಂಬುದನ್ನು ಇಲ್ಲಿರುವ ಕಥೆಗಳ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ.

ಈ ಕೃತಿಯು 50 ಪರಿವಿಡಿಗಳಾದ, ದೇವರಿಗೊಂದು ಥ್ಯಾಂಕ್ಸ್ ಹೇಳೋಣ, ಬಿದಿರು ಹೇಳಿದ ಗುಟ್ಟು, ಅಮ್ಮಾ ನನ್ನ ಜೀವನದ ಮೌಲ್ಯವೆಷ್ಟು?, ಹೊರಗಿನಂತೆ ಒಳಗಣ್ಣು ತೆರೆಯಬೇಕು, ಯಶಸ್ಸಿನ ಹಿಂದಿರುತ್ತದೆ ಕಠಿಣ ಶ್ರಮ, ಅನುಭವವಿಲ್ಲದ ಜ್ಞಾನ, ಶ್ರೀ ಕೃಷ್ಣ ಹೇಳಿದ ಎಲ್ಲಕ್ಕಿಂತ ದೊಡ್ಡದು ಯಾವುದು?, ಕೊಂಬೆ ಇಲ್ಲದಿದ್ದರೇನಂತೆ?, ಒಳ್ಳೆಯದು ಬೆಳೆಯುತ್ತಾ ಹೋಗಬೇಕು, ಕಟ್ಟಿಕೊಟ್ಟ ಬುತ್ತಿ ಎಷ್ಟು ಕಾಲ ಉಳಿದೀತು?, ಕುಂಟುನೆಪ ದುರ್ಬಲ ಮನಸ್ಥಿತಿಯ ಸಂಕೇತ,  ಹುಣಿಸೆಗೆ ಮರವೇಕೆ?, ಕುಂಬಳಕ್ಕೆ ಬಳ್ಳಿಯೇಕೆ?, ಒಣಗಿದ ಎಲೆಗಳೂ ಉಪಯೋಗಕ್ಕೆ ಬರುತ್ತವೆ, ಬದುಕನ್ನು ಹೀಗೂ ಬದಲಿಸಬಹುದು, ಖರೀದಿಸಲಾಗದ ಸಂಪತ್ತು, ಹೀಗೊಂದು ಶ್ರೀಮಂತ ದೇಶದ ಕಥೆ, ಕಲಿಕೆಯಲ್ಲಿ ಸ್ವಂತಿಕೆಯ ಛಾಪಿರಲಿ, ಅರಮನೆ ಬಿಟ್ಟು ರಾಜನೇಕೆ ಓಡಿ ಹೋದ?, ಶಾಂತಿ ಎಲ್ಲಿದೆ?,  ಲಂಚ್ ಬಾಕ್ಸ್ ತೆರೆದಿಟ್ಟ ಜೀವನ ಪಾಠ, ಸಾಧ್ಯ / ಅಸಾಧ್ಯ, ಗುರಿ ಮತ್ತು ಗಮನ ಎರಡೂ ಮುಖ್ಯ, ಕಲ್ಪನೆಯೇ ಬೇರೆ ವಾಸ್ತವಿಕತೆಯೇ ಬೇರೆ ಸ್ವಯಂ ವಿಮರ್ಶೆ ವ್ಯಕ್ತಿಗತ ಬದಲಾವಣೆಯ ಕೀಲಿಕೈ, ಅಗತ್ಯ ಸಮಯದಲ್ಲಿ ಅಲ್ಪವೂ ಅಮೂಲ್ಯ, ಲೋಕದ ಡೊಂಕನ್ನು ತಿದ್ದುವ ಮುನ್ನ, ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು?, ಸೋತ ರಾಜನಿಗೆ ಗೆಲ್ಲಲು ಸಿಕ್ಕಿದ ಪ್ರೇರಣೆ ಯಾವುದು, ಗಾಳಿಯೂ ಬಿಸಿತು ದೀಪವೂ ಆರಿತು, ಭಯದ ರೋಗ, ಸಿದ್ಧಾರ್ಥನಿಗೆ ಗುರುವಾದ ಅಳಿಲು, ಸುಲಭದ ದಾರಿ ಪ್ರಗತಿಗೆ ಅಡ್ಡಿ, ಆ ಜಿಪ್ರಣಾಗ್ರೇಸರನ ಕೊನೆಯ ಮಾತು, ಸರ್ವಾನಂದರ ಗರ್ವ ಭಂಗ, ಆ ವೃದ್ಧೆ ಮಾಡಿದ ತಪ್ಪೇನು?, ಒಳ್ಳೆಯ ವಿಷಯ ಹಂಚಿ ಸದ್ಗತಿ ಪಡೆಯಿರಿ, ಸ್ವಾರ್ಥವಿಲ್ಲದ ಶರಣಾಗತಿಯೇ ಭಕ್ತಿ, ಒಂಟಿತನ ಶಾಪವಲ್ಲ, ಇಂದಿನದನ್ನು ಸ್ವೀಕರಿಸಿ, ಅಂದುಕೊಳ್ಳುವುದು ಜೀವನವಲ್ಲ ಹೊಂದಿಕೊಳ್ಳುವುದು ಜೀವನ, ಸದಾ ಕಾಲಕ್ಕೂ ಸಲ್ಲುವ ಗುರುಶಿಷ್ಯ ಪರಂಪರೆ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು, ಸಂಪಾದನೆ ಮುಖ್ಯವೋ? ಸಂಬಂಧ ಮುಖ್ಯವೋ?, ಎಲ್ಲರೂ ಅವನ ಸೇವಕರ, ಮನದ ಮಾತು, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ, ಒಳ್ಳೆಯ ವಿಚಾರಗಳನ್ನು ಸ್ವೀಕರಿಸಿ, ಹಾರಾಡದ ಗಿಳಿಮರಿ ಹಾರಿದ್ದಾದರೂ ಹೇಗೆ?, ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ, ಕಲಿಕೆಗೆ ಕೊನೆ ಮೊದಲಿಲ್ಲ.ಇವುಗಳನೆಲ್ಲಾ ಒಳಗೊಂಡಿದೆ. 

About the Author

ರಾಜಮ್ಮ ಡಿ. ಕೆ.

ರಾಜಮ್ಮ ಡಿ.ಕೆ ಅವರು ಶಿಕ್ಷಕಿಯಾಗಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ರಂಗಭೂಮಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿರುತ್ತಾರೆ.  ಕೃತಿಗಳು ; ಅರ್ಥಸಹಿತ ಅಮೂಲ್ಯ ಗಾದೆಗಳು, ಯಶಸ್ವಿ ಜೀವನಕ್ಕೆ ಸ್ಫೂರ್ತಿದಾಯಕ ಕತೆಗಳು, ಒಂದು ಕಥೆ ಹೇಳ್ಲಾ, 50 ಬದುಕು ಬದಲಿಸುವ ಕಥೆಗಳು ಪ್ರಶಸ್ತಿ ; 2021ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ‘ರಂಗ ಭೂಮಿ’ ಕ್ಷೇತ್ರ)     ...

READ MORE

Related Books