ಸಾಹಿತಿ ಶಾಂತಾರಾಮ ಸೋಮಯಾಜಿ ಅವರ ‘ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್’ ಕೃತಿಯು ಕಥಾ ಸಂಕಲನವಾಗಿದೆ. ಎರಡು ದಶಕಗಳಲ್ಲಿ ಅವರು ಬರೆದ ವಿಭಿನ್ನ ಕಥಾಹಂದರವುಳ್ಳು ಕೆಲವು ಕತೆಗಳನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. ಕುರುಡು ಪ್ರಸಂಗ, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ವೈಕಂ ಅವರ ಸಿಹಿ ಮಾವಿನ ಮರ, ಬಂಗಾರದ ಹೊರೆ, ನಿಮ್ಮ ಗಂಡನನ್ನು ನೀವೇ ಕೊಂದದ್ದಾ ?, ಹುಚ್ಚಿ ಮತ್ತು ಹುಚ್ಚು ಹಿಡದವರು, ಧರ್ಮ, ಶ್ವಾನ ಪುರಾಣವು, ಮಾಧುರಿ ದೀಕ್ಷಿತಳ ಹೊಸ ಹೆಣ್ಣು ಮಗು, ಕತೆಯಾದಳು ರಾಧೆ, ಚಿಟ್ಟೆ ಕೊಲ್ಲುವವರು, ಒಂದು ಹಂದಿಯ ಕತೆ, ಮಗಳಿಗೊಂದು ಗಂಡು ಬೇಕು, ಅಲ್ಲ...ನೀವೇ ಹೇಳಿ ಶೀರ್ಷಿಕೆಯುಳ್ಳ ಒಟ್ಟು 14 ಕತೆಗಳು ಈ ಕಥಾ ಸಂಕಲನದಲ್ಲಿದೆ.
ಶಾಂತಾರಾಮ ಸೋಮಯಾಜಿ ಅ ವರು ಮೂಲತಃ ಲೇಖಕರು. ಮಕ್ಕ:ಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MORE