ಒಂದು ಊರಿನ ಕತೆಗಳು

Author : ಬರಗೂರು ರಾಮಚಂದ್ರಪ್ಪ

Pages 272

₹ 195.00
Year of Publication: 1999
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 26992014

Synopsys

‘ಒಂದು ಊರಿನ ಕತೆಗಳು’ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪ ಅವರ ಕತಾಸಂಕಲನ. ಬರಗೂರು ರಾಮಚಂದ್ರಪ್ಪ ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಬರವಣಿಗೆ ಆರಂಭಿಸಿದ ಬರಗೂರು, ಮೊದಲಿನಿಂದಲೂ ತಾವು ನಂಬಿದ್ದನ್ನು ಬರೆಯುತ್ತಾ ಬದುಕುತ್ತಾ ಬಂದಿದ್ದಾರೆ. ಕತೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾ, ರಾಜಕಾರಣ ಹೀಗೆ ವಿವಿಧ ಪ್ರಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದೂ ರಾಜಿ ಮಾಡಿಕೊಳ್ಳದ ಮನೋಭಾವ,

ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯದ ಗುಣ ಇವರ ಸೃಜನಶೀಲತೆಯ ಹಿಂದಿನ ನಿಯಂತ್ರಕ ಶಕ್ತಿ. ಒಂದು ಊರಿನ ಕತೆಗಳು' ಇಂಡಿಯಾದ ಮನುಷ್ಯ ಜಗತ್ತಿನ ದ್ಯೋತಕ. ಗ್ರಾಮೀಣ ಬದುಕಿನ ನೆಲೆಗಳ ಕೆನೆ ಇಲ್ಲಿದೆ. ಜಮೀನ್ದಾರಿ ವ್ಯವಸ್ಥೆಯ ವಿವಿಧ ಮುಖಗಳಿಗೆ ಮುಖಾಮುಖಿಯಾಗುವ ಇಲ್ಲಿನ ಚೈತನ್ಯ ಯಾವಾಗಲೂ ಮಾನವೀಯತೆಯ ಪರವಾದುದು. ಕ್ರೂರತೆಗಳ ನಡುವೆಯೇ ಮನುಷ್ಯನ ಹುಡುಕಾಟ ಇಲ್ಲಿ ಮುಖ್ಯವಾಗುತ್ತದೆ. ಸಮಕಾಲೀನ ವೈರುಧ್ಯಗಳನ್ನು ತನ್ನೆಲ್ಲ ತಳಮಳಗಳೊಂದಿಗೆ ಹಿಡಿದಿಡುವ ಒಂದು ಊರಿನ ಕತೆಗಳು' ಗ್ರಾಮೀಣ ಬದುಕನ್ನು ವಿಶಿಷ್ಟ ರೀತಿಯಲ್ಲಿ ಶೋಧಿಸುತ್ತವೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books