ಭೂಮಿಗಾಥೆ

Author : ವಸುಂಧರಾ ಭೂಪತಿ

Pages 172

₹ 60.00




Year of Publication: 2003
Published by: ಕಾಮಧೇನು ಪ್ರಕಾಶನ
Address: ಕಾಮಧೇನು ಪುಸ್ತಕ ಭವನ, ನಂ-5/1, ನಾಗಪ್ಪ ಸ್ಟ್ರೀಟ್, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

‘ಭೂಮಿಗಾಥೆ’ ವಸುಂಧರಾ ಭೂಪತಿ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕೆಲವು ಸತ್ಯಕ್ಕೆ ಸಮೀಪವಾದ ಘಟನೆಗಳು ತಿಳಿಸುತ್ತವೆ. ನಿಜ ಘಟನೆಗಳಿಗೆ ಒಂದಷ್ಟು ಮೆರುಗು ನೀಡಿದ ಇಂಥ ಕಥನಗಳು ನಿಮ್ಮ ತಾಯಿ, ತಂಗಿ, ಪತ್ನಿ ಅಥವಾ ಬಂಧುಗಳದ್ದಾಗಿರಹುದು. ತಮ್ಮ ಸಂಸಾರದ ಸುಖದುಃಖಗಳನ್ನು ಇತರರು ಹೇಳಿಕೊಂಡಾಗ ಒಬ್ಬ ವೈದ್ಯೆಯಾಗಿ ವಸುಂಧರಾ ಭೂಪತಿ ಇವುಗಳನ್ನು ಬರೆದಿದ್ದಾರೆ.

About the Author

ವಸುಂಧರಾ ಭೂಪತಿ
(05 June 1962)

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...

READ MORE

Reviews

ಹೊಸತು-2004- ಸೆಪ್ಟಂಬರ್‌

''ಕ್ರೂರ ನಕಾಕುಲದೊಳಿಡಿದಿರ್ದ ಪೆರ್ಮಡು ಗಂಭೀರ ಜಲಯುತ'ವಾಗಿರುವಂತೆ ಮೇಲ್ನೋಟಕ್ಕೆ ಸಭ್ಯ ನಾಗರಿಕ ಕೆದಕಿದಂತೆ ಎಂದೆನ್ನಿಸಿಕೊಂಡ ಸಮಾಜದಲ್ಲಿ ಆಳ ಕಾಮಧೇನು ಊಹಿಸಲೂ ಸಾಧ್ಯವಾಗದಷ್ಟು ದುಷ್ಟತನವಿರುತ್ತದೆ. ಮನೆತನ, ಅಂತಸ್ತು, ಪ್ರತಿಷ್ಠೆ, ಸ್ಥಾನಮಾನ ಉಳಿಸಿಕೊಳ್ಳುವ ನೆಪದಲ್ಲಿ ಜನರು ತಮ್ಮನ್ನು ತಾವೇ ವಂಚಿಸುತ್ತ ಎಂಥ ಸಮಸ್ಯೆ ಗಳಿದ್ದರೂ ಎಲ್ಲ ಸರಿಯಾಗಿರುವಂತೆ ನಟಿಸುತ್ತಾರೆ. ಈ ಭೂಮಿಯಷ್ಟೇ ತಾಳ್ಮೆಯಿರುವ ಹೆಣ್ಣುಮಕ್ಕಳು ಕೂಡಾ ಏನೇ ಆದರೂ ತಮ್ಮ ದುಃಖ ನೋವು ನುಂಗಿಕೊಳ್ಳುತ್ತ ಸ್ಥಾಪಿತ ಮೌಲ್ಯಗಳ ಸುಳಿಯಲ್ಲಿ ಒದ್ದಾಡುವುದನ್ನು ಇಲ್ಲಿನ ಕೆಲವು ಸತ್ಯಕ್ಕೆ ಸಮೀಪವಾದ ಘಟನೆಗಳು ತಿಳಿಸುತ್ತವೆ. ನಿಜ ಘಟನೆಗಳಿಗೆ ಒಂದಷ್ಟು ಮೆರುಗು ನೀಡಿದ ಇಂಥ ಕಥನಗಳು ನಿಮ್ಮ ತಾಯಿ, ತಂಗಿ, ಪತ್ನಿ ಅಥವಾ ಬಂಧುಗಳದ್ದಾಗಿರಹುದು. ತಮ್ಮ ಸಂಸಾರದ ಸುಖದುಃಖಗಳನ್ನು ಇತರರು ಹೇಳಿಕೊಂಡಾಗ ಒಬ್ಬ ವೈದ್ಯೆಯಾಗಿ ವಸುಂಧರಾ ಭೂಪತಿ ಇವುಗಳನ್ನು ಬರೆದಿದ್ದಾರೆ.


 

Related Books