ಹೊಂಗೆಯ ನೆರಳು

Author : ಗೀತಾ ಬಿ.ಯು

Pages 112

₹ 80.00




Year of Publication: 1999
Published by: ಗೀತಾ ಬಿ.ಯು
Address: 485, 47ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು- 560041

Synopsys

ಗೀತಾ ಬಿ.ಯು ಅವರ ಕಥಾ ಸಂಕಲನ ‘ಹೊಂಗೆಯ ನೆರಳು’ . ಎರಡು ದೀರ್ಘ ಹಾಗೂ ಹಲವು ಚಿಕ್ಕ ಕಥೆಗಳಿವೆ. ಹೊಂಗೆಯ ನೆರಳಲ್ಲಿ, ನಿಜ ಘಟನೆಯನ್ನು ಆಧರಿಸಿದ ಕಥೆ. ಇನ್ನೊಂದು ದೀರ್ಘ ಕಥೆ ‘ಸವಿತಾ’. ಜೊತೆಗೆ, ಅಪುತಸ್ಯ, ಯಾರು ಕಾರಣ, ಹೊಸ ಹಗಲಿನೆಡೆಗೆ, ದಿನಚರಿ, ಪರಿಹಾರ, ಇದು ಯಾವ ಬಂಧ, ಅನಾಥರು ಯಾರು ಮತ್ತು ಮರಳಿದಾಗ ಹೀಗೆ ಹತ್ತು ಕಥೆಗಳಿವೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books