ಜಗತ್‌ ಪ್ರಸಿದ್ಧ ಸಣ್ಣ ಕತೆಗಳು

Author : ಬಿ. ಜನಾರ್ದನ ಭಟ್

Pages 712

₹ 640.00
Year of Publication: 2018
Published by: ಸೃಜನ ಪ್ರಕಾಶನ
Address: ನಂ.893/5, 3ನೇ ಅಡ್ಡರಸ್ತೆ, ಪೂರ್ವ ಬಡಾವಣೆ, ನೆಹರೂ ನಗರ, ಮಂಡ್ಯ

Synopsys

ಕಥೆಗಾರ ಬಿ. ಜನಾರ್ಧನ್‌ ಭಟ್‌ ಅವರ ಸಣ್ಣ ಕತೆಗಳ ಕೃತಿ ’ಜಗತ್‌ ಪ್ರಸಿದ್ಧ ಸಣ್ಣ ಕತೆಗಳು’. ಈ ಅನುವಾದಿತ ಕಥೆಗಳು ವಿವಿಧ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. 63 ವೈವಿಧ್ಯಮಯ ಪಾಶ್ಚಾತ್ಯ ಸಣ್ಣ ಕಥೆಗಳಿದ್ದು, ಪ್ರಾದೇಶಿಕ -ಸಾಂಸ್ಕೃತಿಕ-ಕಥಾ ಶೈಲಿಗಳ ವಿವಿಧ್ಯತೆ ಹಾಗೂ ಕಾಲಘಟ್ಟಗಳನ್ನು ಪ್ರತಿನಿಧಿಸುತ್ತವೆ. ಲ್ಯಾಟಿನ್‌ ಅಮೆರಿಕ, ಇಟಾಲಿಯನ್‌, ಅರೆಬಿಕ್‌ ಮುಂತಾದ ಪ್ರಾಂತ್ಯಗಳ ಕಥೆಗಾರರ ಕಥೆಗಳು ಇಲ್ಲಿವೆ. ಕಥೆಗಳ ಆಯ್ಕೆಯ ಬಗ್ಗೆ ಅನುವಾದಕರೇ ಹೇಳಿಕೊಂಡಂತೆ ’ಈ ಸಂಪುಟದ ಕಥೆಗಳಲ್ಲಿ ಕ್ಲಾಸಿಕಲ್‌ ಅಥವಾ ಹಳೆಯ ಶೈಲಿಯ ಕಥೆಗಳು (ಜೀವನಾನುಭವದ ಸರಳ ರೇಖಾತ್ಮಕ ಕಥೆಗಳು), ಆಶ್ಚರ್ಯದ ಅಂತ್ಯ ಕೊಡುವ ಕಥೆಗಳು, ಬದುಕಿನ ವಿಶಿಷ್ಷಸತ್ಯಗಳನ್ನು ಮತ್ತು ಅನುಭವಗಳನ್ನು ಹೊಸ ಬೆಳಕಿನಲ್ಲಿ ನೋಡುವ ಕಥೆಗಳು, ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯಿಸುವ ಕಥೆಗಳು ಇಲ್ಲಿವೆ’ ಎಂದಿದ್ದಾರೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books