ಗೇರಮರಡಿ ಕತೆಗಳು

Author : ರಹಮತ್ ತರೀಕೆರೆ

Pages 132

₹ 150.00




Year of Publication: 2023
Published by: ಅಮೂಲ್ಯ ಪುಸ್ತಕ
Address: #83/1, 15ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು 560040
Phone: 9448676770

Synopsys

ಗೇರಮರಡಿ ಕತೆಗಳು ಲೇಖಕ ರಹಮತ್ ತರೀಕೆರೆ ಅವರ ಕಥಾಸಂಕಲನ. ಕೃತಿಯ ಕುರಿತು ತಿಳಿಸುತ್ತಾ 'ಗೇರಮರಡಿ, ತರೀಕೆರೆ ಸೀಮೆಯ ಒಂದು ಪುಟ್ಟ ಹಟ್ಟಿ. ಕಾಡುಗೇರಿನ ಮರಗಳು ತುಂಬಿದ ಮೊರಡಿಗಳ ತಪ್ಪಲಿನಲ್ಲಿ ಅದಿತ್ತು. ಕಾಡುಗೊಲ್ಲರೇ ವಾಸವಾಗಿರುವ ಈ ಹಟ್ಟಿಯ ಜನ, ಸಣ್ಣ ರೈತಾಪಿಗಳು, ಪಶುಗಾಹಿಗಳು; ನಮ್ಮೂರಿಗೆ ಬೆಳಬೆಳಿಗ್ಗೆಯೇ ಹಾಲು ಮಾರಲು ಬರುತ್ತಿದ್ದವರು; ದನ-ಆಡು-ಕುರಿ ಬಿಟ್ಟುಕೊಂಡು ಅಡವಿಗೂ, ಹೊಲದ ಕೆಲಸಕ್ಕೂ ಹೋಗುತ್ತಿದ್ದ ದುಡಿಮೆಗಾರರು: ಪ್ರಣಯ ಸಾಹಸದ ಹಲವಾರು ರೋಚಕ ಕತೆಗಳಿಗೆ ಕಾರಣಕರ್ತೃ ಆಗಿದ್ದವರು; ಇಡೀ ಊರೇ ಕಥಿಸುವ ಹಾಡುವ ಕಲಾವಿದರಿಂದ ತುಂಬಿತ್ತು. ಅಕ್ಷರದ ಸಹವಾಸವಿದ್ದಿದ್ದರೆ, ಇವರೆಲ್ಲ ಕನ್ನಡದ ಪ್ರತಿಭಾವಂತ ಲೇಖಕರಾಗಿರುತ್ತಿದ್ದರು ಅನಿಸುತ್ತಿತ್ತು. ಇಂತಹ ಹಳ್ಳಿಯಲ್ಲಿ ನನ್ನ ತಾರುಣ್ಯದ ಹತ್ತು ವರ್ಷಗಳು ಕಳೆದವು. ಅವು ನನ್ನನ್ನು ಇನ್ನಿಲ್ಲದಂತೆ ಸೃಜನಶೀಲಗೊಳಿಸಿದವು. ನನ್ನ ಪಾಲಿಗೆ ಗೇರಮರಡಿ ಜನಪದ ಪ್ರತಿಭೆಯ ಸಂಕೇತ. ಪ್ರಸ್ತುತ ಸಂಕಲನದ ಕತೆಗಳನ್ನು ಬೇರೆಬೇರೆ ಜಾತಿ ಧರ್ಮ ಸ್ಥಳಗಳಿಗೆ ಸೇರಿದ ಕತೆಗಾರರು ನಿರೂಪಿಸಿದ್ದರೂ, ಇವನ್ನೆಲ್ಲ ನಾನು ಕೇಳಿದ್ದು ಮತ್ತು ಸಂಗ್ರಹಿಸಿದ್ದು ಗೇರಮರಡಿಯಲ್ಲಿ. ಈ ಕತೆಗಳಲ್ಲಿ ಈ ಊರಿನ ಪರಿಸರದ ವಿವರಗಳಿವೆ ಎಂತಲೇ ಇವು 'ಗೇರಮರಡಿ ಕತೆಗಳು', ನಾಲ್ಕು ದಶಕಗಳ ಹಿಂದೆ ಸಂಗ್ರಹ ಮಾಡಿದ ಈ ಕತೆಗಳು ಈಗಲೂ ತಾಜಾತನದಿಂದ ನಳನಳಿಸುತ್ತಿವೆ. ಇವನ್ನು ನಿರೂಪಿಸಿದ ಕತೆಗಾರರೆಲ್ಲರೂ ನಿಧನರಾಗಿದ್ದಾರೆ. ಆದರೆ ಕತೆಗಳಲ್ಲಿ ಅವರ ಕಲಾಚೈತನ್ಯ ಮತ್ತು ಲೋಕದೃಷ್ಟಿಗಳು ಜೀವಂತವಾಗಿವೆ' ಎಂದಿದ್ದಾರೆ ರಹಮತ್ ತರೀಕೆರೆ

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books