ಪದುಮ ಪುರುಷ

Author : ಹೆಚ್.ಆರ್. ಸುಜಾತಾ

Pages 95

₹ 140.00
Year of Publication: 2023
Published by: ಕೌದಿ ಪ್ರಕಾಶನ
Address: ಚರ್ಚ್ ರಸ್ತೆ, ಆನೇಕಲ್- 562106

Synopsys

‘ಪದುಮ ಪುರುಷ’ ಲೇಖಕಿ ಹೆಚ್.ಆರ್. ಸುಜಾತ ಅವರ ಕಥಾಸಂಕಲನ. ಇಲ್ಲಿ ಹನ್ನೆರಡು ಕತೆಗಳು ಸಂಕಲನಗೊಂಡಿದ್ದು, ಇವುಗಳಲ್ಲಿ ಎಂಟು ಕತೆಗಳು ಹಲವು ಸಾಹಿತ್ಯಾಸಕ್ತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಹನ್ನೆರಡು ಕಥೆಗಳನ್ನು ಎರಡು ಭಾಗಗಳಲ್ಲಿ ವಿಭಾಗಿಸಿದ್ದಾರೆ. ಮೊದಲ ಭಾಗವನ್ನು ಪದುಮ ದಳಗಳು ಎಂದು ಗುರುತಿಸಿದ್ದು, ಇಲ್ಲಿ ಪದುಮ ಪುರುಷ, ಮಳೆಯ ಧ್ಯಾನ, ಮೂರು ಮನೆಗಳು, ನೆಲೆ ಹುಡುಕುತ್ತ.., ಪ್ರಾಣ ಪದಕ, ಮತ್ತು ಮಗ್ಗದ ಲಾಳಿ ಕತೆಗಳಿವೆ. ಎರಡನೇ ವಿಭಾಗವನ್ನು ಬಿಡಿ-ಇಡಿ ಕತೆಗಳು ಎಂಬ ತಲೆಬರಹವಿದ್ದು, ಈ ವಿಭಾಗದಲ್ಲಿ ಇಲ್ಲಿರಲಾರೆ ಅಲ್ಲಿಗೆ…, ಬಿಡದಾ ಮಾಯೆ, ಮಾವಿನ ಮರದ ನೆರಳಲ್ಲಿ, ಸಮೀನಾಳ ಪ್ರತಿಜ್ಞೆ, ಕನಸಿನ..ಒಳಗೊಂದು..ಮನಸು, ಪ್ರಾಣಾದ ಗೆಳೆಯ ಕತೆಗಳು ಸಂಕಲನಗೊಂಡಿವೆ.

About the Author

ಹೆಚ್.ಆರ್. ಸುಜಾತಾ

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ...

READ MORE

Related Books