ಬೇರು

Author : ಸತೀಶ್ ಚಪ್ಪರಿಕೆ

Pages 136

₹ 80.00
Year of Publication: 2002
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಮಾನವೀಯತೆಯ ಮೂಲ ಜೀವಾಳವಾದ ಮನುಷ್ಯ ಸಂಬಂಧಗಳ ಅಗತ್ಯ ಹಾಗೂ ಅನಿವಾರ್ಯತೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಅದಕ್ಕೆ ಸಮಾನಾಂತರವಾಗಿ ಸಂಬಂಧಗಳ ಬಿರುಕನ್ನೂ ತೋರುತ್ತಾ ವಿಷಾದ ಭಾವದ ಚಲನಶೀಲತೆಯನ್ನು ಲೇಖಕ ಸತೀಶ ಚಪ್ಪರಿಕೆ ಅವರ ‘ಬೇರು’ ಕತಾ ಸಂಕಲನ ಒಳಗೊಂಡಿದೆ.

ಈ ಕೃತಿಯು ಲೇಖಕರ ಮೊದಲ ಸಂಕಲನವಾಗಿದ್ದರೂ, ತಮ್ಮ ಹುಟ್ಟೂರು ಕುಂದಾಪುರದ ಭಾಷೆ-ಸಂಸ್ಕೃತಿಯ ಸೊಗಡನ್ನು ಇಲ್ಲಿಯ ಕತೆಗಳು ಸಂಪೂರ್ಣವಾಗಿ ಪ್ರತಿಫಲಿಸಿವೆ. ಕತೆಗಳ ವಸ್ತು ಹಾಗೂ ವಿಚಾರ ಅವಲೋಕನದ ದೃಷ್ಟಿಯಿಂದ ಇಲ್ಲಿಯ ಕತೆಗಳನ್ನು“ದಡದಂಚಿನಿಂದ...’ ಹಾಗೂ ‘ದೂರ ಸರಿದ ಮೇಲೆ..’ ಎಂದು ವಿಭಾಗಿಸಲಾಗಿದೆ. ಹುಟ್ಟೂರಿನಲ್ಲಿ ತಾವು ಕಳೆದ ಬಾಲ್ಯವನ್ನು ಆಧರಿಸಿ, ಆ ನೆಲದ ವಾಸನೆ ಹಾಗೂ ಹಳ್ಳಿಯ ಸಾಂಸ್ಕೃತಿಕ ಸೊಗಡಿನ ಹಂದರ ಪಡೆದ ನಾಲ್ಕು ಕತೆಗಳು ‘ದಡದಂಚಿನಿಂದ’ ಮೊದಲ ಭಾಗದಲ್ಲಿವೆ. ಆ ಪೈಕಿ,“ಬೇರು’ ಮತ್ತು ‘ಮರ’ -ಈ ಎರಡು ಕತೆಗಳು ಪ್ರಜಾವಾಣಿಯ ದೀಪಾವಳಿ ಕತಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ.

ಉಳಿದ ಐದು ಕತೆಗಳು ನಗರ ಕೇಂದ್ರಿತ ಕತಾ ಹಂದರ ಹೊಂದಿದ್ದು, ಅವುಗಳನ್ನು ಎರಡನೇ ಭಾಗದಲ್ಲಿ (ದೂರ ಸರಿದ ಮೇಲೆ..) ಸೇರ್ಪಡೆಗೊಳಿಸಿದೆ. ಮೊದಲ ಭಾಗದ ಕತೆಗಳಲ್ಲಿ ಮನುಷ್ಯ ಸಂಬಂಧಗಳಿಗಾಗಿ ಹಂಬಲಿಸುವ, ಅದನ್ನು ಸುಖಿಸುವ ಸಂತೃಪ್ತ ಭಾವ ಮಡುಗಟ್ಟಿದ್ದರೆ, ನಗರ ಕೇಂದ್ರಿತ ಕತಾ ಹಂದರದಲ್ಲಿ ಸಂಬಂಧಗಳು ಗೊಂದಲದ ಗೂಡಾಗಿ, ಚಡಪಡಿಕೆಯ ಕೇಂದ್ರಗಳಾಗುವ ಪರಿಯನ್ನು ಅರ್ಥಪೂರ್ಣವಾಗಿ ಧ್ವನಿಸಿವೆ.

About the Author

ಸತೀಶ್ ಚಪ್ಪರಿಕೆ

ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್  ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ  ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್  ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ...

READ MORE

Related Books