ಮಾಯಾ ಕೋಲಾಹಲ

Author : ಮೌನೇಶ ಬಡಿಗೇರ

Pages 138

₹ 100.00
Year of Publication: 2013
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ರಂಗಕರ್ಮಿ, ಲೇಖಕರೂ ಆದ ಮೌನೇಶ ಬಡಿಗೇರ ಅವರ ಕೃತಿ ’ ಮಾಯ ಕೋಲಾಹಲ’.

ತಾಯಿ-ಮಗನ ಸಂಬಂಧ, ಗಂಡ-ಹೆಂಡತಿಯರ ಸಂಬಂಧಗಳ ಮೂಲಕ ಕೌಟುಂಬಿಕತೆಯನ್ನು ಈ ಕೃತಿಯಲ್ಲಿ ಬಿಂಬಿಸಿದ್ದಾರೆ.  ಚಿಟ್ಟೆ ಮತ್ತು ಸೆಲ್ವಿ ಮತ್ತಿತರ ಕತೆ, ಒಟ್ಟು ಎಂಟು ಕತೆಗಳ ಗುಚ್ಛ ’ಮಾಯಾ ಕೋಲಾಹಲ’ದಲ್ಲಿದೆ. ಇಲ್ಲಿರುವ ಎಂಟು ಕತೆಗಳ ಸಾಮಾನ್ಯವಾದ ಒಂದು ಅಂಶವೆಂದರೆ ಟಿವಿ ಮತ್ತು ಕ್ರೈಂ ಟೈಮ್ ಎಂಬ ಒಂದು ಕಾರ್ಯಕ್ರಮ.  ಲೇಖಕ ಮೌನೇಶ್ ಅವರು ಇದುವರೆಗಿನ ತಮ್ಮ ಪ್ರೌಢ ಬದುಕಿನ ಅನುಭವಗಳು, ಮತ್ತು  ತಮಗೆ ದಕ್ಕಿಸಿದ ಗ್ರಹಿಕೆಗಳನ್ನು ಅವು ತಮಗೆ ತಟ್ಟಿದಷ್ಟೇ ತೀವ್ರವಾಗಿ - ಅದಕ್ಕಾಗಿ ಕನಸು, ರೂಪಕ, ವ್ಯಂಗ್ಯ, ವಿನೋದ ಇತ್ಯಾದಿಗಳನ್ನು ಬಳಸಿಕೊಂಡು ಇಲ್ಲಿರುವ ಕತೆಗಳನ್ನು ಕಟ್ಟಿದ್ದಾರೆ.

ಮೌನೇಶ ಬಡಿಗೇರ ಅವರ ’ಮಾಯಾ ಕೋಲಾಹಲ’  ಕೃತಿಗೆ ಛಂದ ಪುಸ್ತಕ ಬಹುಮಾನ ಲಭಿಸಿದೆ.

Related Books