ಸಾಂವಿ

Author : ಸುರೇಶ ಮುದ್ದಾರ

Pages 112

₹ 120.00
Year of Publication: 2020
Published by: ಪಂಚಮಿ ಮೀಡಿಯಾ ಪಬ್ಲಿಕೇಶನ್ಸ್
Address: # 99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯ ರಸ್ತೆ. ಬಿಎಸ್‍ಕೆ ಮೂರನೇ ಹಂತ, ಬೆಂಗಳೂರು-560085
Phone: 9739561334

Synopsys

ಸುರೇಶ ಮುದ್ದಾರ ಅವರು ಬರೆದ ಕಥಾ ಸಂಕಲನ-ಸಾಂವಿ. ಪ್ರೊ. ಚಂದ್ರಶೇಖರ ಅಕ್ಕಿ ಬೆನ್ನುಡಿ ಬರೆದು ‘ಸಾಂವಿ ಕಥಾ ಸಂಕಲನವು ಹಳ್ಳಿಯ ಬದುಕಿಗೆ ಸಾಕ್ಷಿ ಎಂಬಂತೆ ಹಿಡಿದ ಕನ್ನಡಿಯಂತಿದೆ. ಅವರ ಕಥೆಗಳಲ್ಲಿ ಗೋಕಾಕ ವಿಶೇಷವಾಗಿ ಕುಂದರನಾಡು ಪ್ರತಿಫಲನಗೊಂಡಿದೆ. ಆ ಸೀಮೆಯ ಸೊಗಡು, ಭಾಷೆ ಸಂಸ್ಕೃತಿಯನ್ನು ಕಥೆಗಳು ಮೈಗೂಡಿಸಿಕೊಂಡಿವೆ’ ಎಂದು ಪ್ರಶಂಸಿಸಿದ್ದರೆ, ಮತ್ತೋರ್ವ ಲೇಖಕ ಶ್ರೀಧರ ಬನವಾಸಿ ಅವರು ‘ಸುರೇಶ ಮುದ್ದಾರರ ಕಥೆಗಳು ಗೋಕಾಕ್ ಸೀಮೆಯ ಗ್ರಾಮೀಣ ಜಗತ್ತನ್ನು ಪರಿಚಯಿಸುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಸುರೇಶ ಮುದ್ದಾರ

ಲೇಖಕ ಸುರೇಶ ಮುದ್ದಾರ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮದವಾಲ ಗ್ರಾಮದವರು. ಅರಭಾವಿ ಮಠದ ಶ್ರೀ ಶಿವಾನಂದ ಶಿವಯೋಗಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು. ‘ಸಾಂವಿ’ ಎಂಬುದು ಇವರ ಕಥಾ ಸಂಕಲನ. ಗೋಕಾಕ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ, ಮೂಡಲಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕತೆ, ಕಾವ್ಯ, ವಿಮರ್ಶೆ ಇವರ ನೆಚ್ಚಿನ ಸಾಹಿತ್ಯಿಕ ಕ್ಷೇತ್ರಗಳು. ಇವರು ಬರೆದ ಲೇಖನಗಳು ಜಿಲ್ಲೆಯ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಸಾಂವಿ’ (ಕಥಾ ಸಂಕಲನ) ಇವರ ಚೊಚ್ಚಲ ಕೃತಿ.  ...

READ MORE

Related Books