ಕೊಳ್ಳದ ಹಾದಿ

Author : ಜಿ.ಪಿ. ಬಸವರಾಜು

Pages 160

₹ 150.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

'ಕೊಳ್ಳದ ಹಾದಿ' ಜಿ.ಪಿ. ಬಸವರಾಜು ಅವರ ಕಥಾಸಂಕಲನ. ಬದುಕಿನ ಸರಳ ಸೌಂದರ್ಯವನ್ನು ಹಿಡಿಯ ಹೊರಟ ಕತೆಗಳಿವು. ಪ್ರೀತಿ, ಪ್ರಾಮಾಣಿಕತೆ, ದ್ವಂದ್ವ, ಅವಮಾನ, ಆದರ್ಶ, ನಂಬಿಕೆ, ಸ್ನೇಹ, ಸ್ವಾಭಿಮಾನ, ಸಹನೆ ಇವುಗಳನ್ನು ಯಾವ ಭಾರವಿಲ್ಲದೆ ಕಾಣಿಸಲೆತ್ನಿಸಿವೆ. ಒಂದರ್ಥದಲ್ಲಿ ವ್ಯಕ್ತಿಯ ಒಳಮನಸ್ಸಿಗೆ ಲಗ್ಗೆ ಹಾಕಿದ ಕತೆಗಳಿವು. ಒಳ್ಳೆತನ, ಸಜ್ಜನಿಕೆ, ವಿನಯವಂತಿಕೆ ತನಗೇ ತಾನೇ ಬೆಳಗುವ ಇತರರನ್ನೂ ಬೆಳಗಿಸುವ ವಿಸ್ಮಯಕ್ಕೆ ಇಲ್ಲಿಯ ಕತೆಗಳು ಎದೆತೆರೆದಿವೆ. ಇದು ನವ್ಯದ ರಚನಾ ಮಾದರಿ ಅಂತನ್ನಿಸಿದರೂ ಅಷ್ಟು ನಿಗೂಢತೆ, ಅನಗತ್ಯ ಸಂಕೀರ್ಣತೆಗಳ ಲೋಕವಲ್ಲವಿದು. ಕುವೆಂಪು, ಮಾಸ್ತಿ ಪರಂಪರೆಯ ಕತೆಗಳದೊಂದು ಮಾರ್ದವ ಗುಣ ಇಲ್ಲಿಯೂ ಬಂದಿದೆ.

ನಮ್ಮ ದಟ್ಟ ಸಾಮಾಜಿಕ ವಿವರಗಳುಳ್ಳ ಕತೆಗಳ ನಡುವೆ ಇವು ವಿಭಿನ್ನ ಹಾದಿ ಒಡಿದಂತೆ ತೋರುತ್ತದೆ. 'ಎದೆಯ ಭಾವ ಬೇರೆ, ನಾಲಗೆ ಹೊರಹಾಕುವ ಸೊಲ್ಲು ಬೇರೆ' ಎಂಬ ಮಾತೊಂದು ಇಲ್ಲಿಯ ಕತೆಗಳಲ್ಲಿ ಬಂದಿದೆ. ಈ ಭಾವ ಮತ್ತು ಸೊಲ್ಲುಗಳ ನಡುವಿನ ವ್ಯತ್ಯಾಸಕ್ಕೆ ಕತೆಗಳ ಲೋಕ ಮರುಗಿದೆ. ಇಂಥ ಬಿರುಕಿಲ್ಲದ ಬದುಕಿನ ಸಾಧ್ಯತೆಗಳನ್ನು ಕಾಣಿಸುವುದೂ, ಹುಡುಕುವುದೂ ಇಲ್ಲಿಯ ಕತೆಗಳ ಗುರಿ. ಇಲ್ಲಿಯ ಬದುಕಿನ ತಪ್ತ, ಆರ್ದ, ವಿನಮ್ರ ಸೆಲೆಗಳ ಅನ್ವೇಷಣೆ ಕುತೂಹಲ ಉಂಟುಮಾಡುತ್ತದೆ. ಜಿ.ಪಿ.ಬಸವರಾಜು ಅವರು ಇದನ್ನೆಲ್ಲ ಹೇಳಲು ಸಹಜಮಾರ್ಗದ ಭಾಷೆಗೆ ಮಾರುಹೋಗಿದ್ದಾರೆ. ಲಾಭ ನಷ್ಟದ ಅಪೇಕ್ಷೆಯಿಲ್ಲದೆ, ಲೆಕ್ಕಾಚಾರದ ಹಂಗಿಲ್ಲದೆ ಬದುಕುವ ಇಲ್ಲಿನ ಪಾತ್ರಗಳು ಬದುಕನ್ನು ಅರಳಿಸುವ, ಮಾಗಿಸುವ ಪರಿ ಅಚ್ಚರಿ ಉಂಟುಮಾಡುತ್ತದೆ.

About the Author

ಜಿ.ಪಿ. ಬಸವರಾಜು
(03 August 1952)

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...

READ MORE

Related Books