ಅಶ್ವತ್ಥಾಮ ಹತಃ

Author : ಸಿ.ಬಿ.ಶೈಲಾ ಜಯಕುಮಾರ್

Pages 148

₹ 130.00




Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, 100 ಅಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ
Phone: 9449886390

Synopsys

ಅಶ್ವತ್ಥಾಮ ಹತಃ ಸಿ.ಬಿ ಶೈಲಾ ಕುಮಾರ್‌ ಅವರ ಕಥ ಸಂಕಲನವಾಗಿದೆ. ಮೊದಲ ಮೂರು ಕಥಾವಸ್ತು ಮಹಾಭಾರತದ ಮೂರು ಪಾತ್ರಗಳಾದ ಅಶ್ವತ್ಥಾಮ, ಮಹಾತಪಸ್ವಿ ಹಿಡಿಂಬೆ ಮತ್ತು ಧೃತರಾಷ್ಟ್ರನ ಅಂತಃಚಕ್ಷು ಸಂಜಯನ ಬಗ್ಗೆ ಇದೆ.ಈ ಪಾತ್ರಗಳ ಬಗ್ಗೆ ಓದುವಾಗ ಓದುಗರನ್ನು ಪರಕಾಯ ಪ್ರವೇಶ ಮಾಡಿಸುವುದು ಲೇಖಕಿಯರ ನಿರೂಪಣೆಯ ವಿಶೇಷತೆ. ಸಂಜಯನಿಗೆ ಅರಮನೆಯಲ್ಲಿ ಇದ್ದೂ ಹೋರಾಟದ ಬದುಕೇ ಅನುಭವಿಸಬೇಕಾದ ಅನಿವಾರ್ಯತೆ. ಹದಿನೆಂಟು ದಿನಗಳ ಯುದ್ಧದಲ್ಲಿ ಬರೀ ಸಾವಿನ ಸುದ್ದಿಗಳು. ಸಂಜಯನಿಗೆ ಲಭಿಸಿದ ಈ ವಿಶಿಷ್ಟ ಶಕ್ತಿ ಸೌಭಾಗ್ಯವೋ,ದೌರ್ಭಾಗ್ಯವೋ ? ಆತನ ಮನಸಿನ ಉದ್ವೇಗ, ದ್ವಂದ್ವ,ತುಮುಲಗಳನ್ನು ಮಹಾಭಾರತ ಸಂಪೂರ್ಣ ಕಥೆಯ ಜೊತೆಗೆ ತಿಳಿಯಬಹುದು. ಕಥಾಸಂಕಲನ ಇತಿಹಾಸದ ಕಥೆಗಳೂ ಇವೆ. ಚಾಣುಕ್ಯ ಗುರುವಿನ ಸಹಾಯದಿಂದ ಚಂದ್ರಗುಪ್ತನು ನಂದರಾಜನನ್ನು ಸೋಲಿಸಿ ಭರತ ವರ್ಷದ ಮೊದಲ ಚಕ್ರಾಧಿಪತ್ಯ ಸಾಧಿಸುವ ಇತಿಹಾಸ ಮುಂದೆ ಗುರು, ಹಿಂದೆ ಗುರಿಯಲ್ಲಿದೆ. ಅದೇ ರೀತಿ ನ್ಯಾಯ ನಿರ್ಣಯ ಮತ್ತು ವಿಜಯನಗರದ ವೀರಪುತ್ರ ಕಥೆಗಳು ಇತಿಹಾಸವನ್ನು ಓದಲು ಆಸಕ್ತಿ ಮೂಡಿಸುತ್ತವೆ.

About the Author

ಸಿ.ಬಿ.ಶೈಲಾ ಜಯಕುಮಾರ್

ಸಿ.ಬಿ.ಶೈಲಾ ಜಯಕುಮಾರ್ ಅವರು ಮೂಲತಃ ಚಿತ್ರದುರ್ಗದವರು. MA (English) M Ed , Diploma in Journalism ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅವರು ಜೂನ್‌ 2020 ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದುರ್ಗದ ಲೇಖಕಿಯರ ಕಥಾಸಂಕಲನದ 'ಮೊದಲ ಹೆಜ್ಜೆ' ಕೃತಿಯ ಸಂಪಾದಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ನುಡಿಗನ್ನಡಿ (ಆಕಾಶವಾಣಿಯ ನಲ್ನುಡಿಗಳ ಸಂಕಲನ), ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ (ವೈಚಾರಿಕ ಲೇಖನಗಳ ಸಂಕಲನ) , ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ರಸಪ್ರಶ್ನೆಗಳು, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು.(ಪುರಾಣಗಳ ಚಿರಾಯುಗಳ ಬಗ್ಗೆ), ಅಂತಃಕರಣದ ...

READ MORE

Related Books