ಕನ್ನೆಮಳೆ ಕಥೆಗಳು

Author : ಮೊಗಳ್ಳಿ ಗಣೇಶ್

Pages 288

₹ 195.00




Year of Publication: 2017
Published by: ಅಂಕಿತ ಪುಸ್ತಕ
Address: #53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ ಬೆಂಗಳೂರು- 560004
Phone: 26617100

Synopsys

‘ಕನ್ನೆಮಳೆ’ ಕೃತಿಯು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನವಾಗಿದೆ. ಕೃತಿಯ ಕುರಿತು ಲೇಖಕ, ‘ಕತೆಯೇ ಬೇರೆ ಬದುಕೇ ಬೇರೆ ಎಂದು ಭಾವಿಸಿದವನಲ್ಲ. ನನ್ನ ಸಂಕಟ, ಅಸಹಾಯಕತೆ, ತೀವ್ರವಾದ ಅಂತರಂಗದ ಕಿಚ್ಚು, ಅದರಿಂದ ಹುಟ್ಟುವ ಸಾತ್ವಿಕ ಸಿಟ್ಟು ಇವೆಲ್ಲ ಇಲ್ಲಿರುವ ಕತೆಗಳ ಬೇರುಗಳಾಗಿವೆ. ನನ್ನ ಸುತ್ತಣ ಲೋಕಕ್ಕೂ ಕಥೆಗಳ ಒಳಗಿನ ತಾಕಲಾಟಕ್ಕೂ ಬೆಸುಗೆಯಾಗಿ ಕಂಡುಕೊಂಡಿರುವ ಅಂಶಗಳು ಇಲ್ಲಿ ಭಿನ್ನವಾದ ರೂಪಗಳನ್ನು ತಾಳಿವೆ’ ಎಂದಿದ್ದಾರೆ.

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Related Books