ಕಲ್ಲು ಕರಗುವ ಸಮಯ

Author : ಪಿ. ಲಂಕೇಶ್

Pages 168

₹ 150.00

Buy Now


Year of Publication: 2012
Published by: ಲಂಕೇಶ್ ಪ್ರಕಾಶನ

Synopsys

’ಸಾಹಿತ್ಯ ಕೊನೆಗೂ ಸಾಹಿತಿಗಳಿಂದ ನಿರೀಕ್ಷಿಸುವುದು ನ್ಯಾಯವಂತಿಕೆ, ನಿಷ್ಠುರತೆಯನ್ನು; ಅದು ಇದ್ದಾಗ ನಿರೂಪಣೆ, ವರ್ಣನೆ ಇತ್ಯಾದಿಗಳು ತಾವಾಗಿಯೇ ಬರುತ್ತವೆ. ನಿಷ್ಠುರತೆಯ ಸೂತ್ರದಲ್ಲಿಯೇ ಪ್ರೀತಿ, ಮಾನವೀಯತೆ ಎಲ್ಲವೂ ಇವೆ; ಪ್ರೀತಿ, ಮಾನವೀಯತೆಯ ನಿರರ್ಥಕತೆ ಕೂಡ’ ಎಂದು ನೇರ ಬಾಣ ಹೂಡುವ ಸಾಹಿತಿ ಪತ್ರಕರ್ತ ಪಿ. ಲಂಕೇಶರ ಕಥಾ ಸಂಕಲನ ’ಕಲ್ಲು ಕರಗುವ ಸಮಯ’ ಕನ್ನಡದಲ್ಲಿ ಸದಾ ನಳನಳಿಸುತ್ತಲೇ ಇರುವ ಹೂವು. 

ಲಂಕೇಶ್‌ ಕೇವಲ ವ್ಯಕ್ತಿಯಲ್ಲ ಅದೊಂದು ವಿದ್ಯಮಾನ ಎನ್ನುವವರಿದ್ದಾರೆ. ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ, ರಾಜಕಾರಣ ಹೀಗೆ ಎಲ್ಲೆಲ್ಲೂ ಸಂದ ದೈತ್ಯ ಪ್ರತಿಭೆ. ಅವರು ’ಕಲ್ಲು ಕರಗುವ ಸಮಯ’ವನ್ನು ಪಡಿಮೂಡಿಸಿರುವ ರೀತಿ ಅನನ್ಯವಾದುದು. ಓದಿಯೇ ಸವಿಯಬೇಕಾದಂತಹ, ಆ ಕತೆಗಳ ಬಗ್ಗೆ ಬೇರೆಯವರು ಏನು ಬರೆದರೂ ಮಿತಿಯೇ ಎನ್ನಬಹುದಾದ ವಿಶಿಷ್ಟ ಕೃತಿ ಇದು. 

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books