ಕಾಡೋಮಾಸ್ಟ್ರು

Author : ಶರತ್‍ ಕಲ್ಕೋಡ್

Pages 136

₹ 150.00




Year of Publication: 2022
Published by: ನ್ಯೂ ವೇ ಬುಕ್
Address: 90/3 ಮೊದಲನೇ ಮಹಡಿ, ಈಟ್‌ ಸ್ಟ್ರೀಟ್‌, ಬಸವನಗುಡಿ, ಬೆಂಗಳೂರು - 560004
Phone: 9448788222

Synopsys

`ಕಾಡೋಮಾಸ್ಟ್ರು’ ಶರತ್ ಕಲ್ಕೋಡ್ ಅವರ ಕಥಾಸಂಕಲನವಾಗಿದೆ. ಗ್ರಾಮೀಣ ಸೊಗಡಿನ ಪರಿಚಯದ ಜೊತೆಜೊತೆಗೆ ಅಲ್ಲಿನ ಭಾಷೆಯಲ್ಲಿ ಕಂಡುಬರುವ ಅಪರೂಪದ ಪದಗಳ ಬಳಕೆಯು ಓದುಗನಿಗೆ ಪ್ರಿಯವೆನ್ನಿಸುತ್ತದೆ. ಮುಂದಿನ ಕಾಲದ ಕನ್ನಡ ನಿಘಂಟುಕಾರರಿಗೆ ಇಲ್ಲಿನ ಹಲವಾರು ಪದಗಳು ಗ್ರಾಸವಾಗಬಹುದು. ಈ ಕೃತಿ ಹೇಳುವಂತೆ ಸಿಂಧ್ ಪ್ರಾಂತ್ಯದ ದಯಾರಾಮ್ ಗಿಡೂಮಾಲ್ ತಮ್ಮ ಪತ್ನಿಯೊಡಗೂಡಿ ವಿಧವೆಯರು, ಅನಾಥೆಯರಿಗೆಂದು ಆಶ್ರಮವೊಂದನ್ನು ನಡೆಸುತ್ತಿದ್ದರು. ಅಲ್ಲಿಗೆ ಸೇರಿದ ಅನಾಥೆಯೊಬ್ಬಳು ಅಚಾತುರ್ಯದಿಂದ ಬಸಿರಾದಳು. ಅವಳನ್ನು ತಪ್ಪಿತಸ್ಥೆಯೆಂದರೆ ಪ್ರಾಣಕ್ಕೆ ಹಾನಿ ಮಾಡಿಕೊಂಡಾಳೆಂದು ಪತ್ನಿಯೇ ಗಿಡೂಮಲ್ಲರಿಗೆ ‘ಅವಳ ಗರ್ಭಕ್ಕೆ ಹೊಣೆ ನೀವೇ ಎಂದು ಸಾರಿಬಿಡಿ. ಮಗುವಿಗೆ ಅನಾಥಪ್ರಜ್ಞೆ ಕಾಡದಿರಲಿ’ ಎಂದು ಸಲಹೆ ನೀಡಿದ್ದಲ್ಲದೆ ತಾಕೀತು ಮಾಡಿದರು. ಗಿಡೂಮಾಲ್ ಅಸ್ತು ಎಂದದ್ದಲ್ಲದೆ ‘ಈ ದಿನದಿಂದ ನಾನೇ ಸ್ಥಾಪಿಸಿರುವ ಎಲ್ಲ ಸಮಾಜ ಸುಧಾರಣಾ ಸಂಸ್ಥೆಗಳಿಂದ ದೂರ ಸರಿಯುತ್ತಿದ್ದೇನೆ’ ಎಂದು ಸಾರ್ವಜನಿಕವಾಗಿ ಘೋಷಿಸಿ , ತಮ್ಮ ಊರನ್ನೇ ತೊರೆದು ಹೊರಟುಬಿಟ್ಟರು. ಸರಿಸುಮಾರು ಇದೇ ಮಟ್ಟದ, ಆದರೆ ಇದಕ್ಕಿಂತಲೂ ವಿಸ್ತೃತವಾದ ಉತ್ತಮನೊಬ್ಬನ ಚರಿತೆಯೇ ‘ಕಾಡೋಮಾಷ್ಟ್ರು’ ಎಂಬ ಈ ಹೊತ್ತಿಗೆಯಲ್ಲಿನ ಕಥೆ.

About the Author

ಶರತ್‍ ಕಲ್ಕೋಡ್

ಶರತ್ ಕಲ್ಕೋಡ್ (1946) ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮಗಳೆರಡರಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿರುವವರು, ಮೂಲತಃ ಮಲೆನಾಡಿನವರು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದವರು. 1981ರಲ್ಲಿ ಮಂಗಳೂರಿನ 'ಸಂತೋಷ' ಮಾಸಪತ್ರಿಕೆಯ ಸಂಪಾದಕ ಮಂಡಳಿಗೆ ಸೇರಿ, ಪತ್ರಿಕಾ ಜೀವನವನ್ನು ಆರಂಭಿಸಿದ ಶರತ್ ಕಲ್ಕೋಡ್, ಮುಂದೆ ಮಣಿಪಾಲದ 'ತರಂಗ' ಪತ್ರಿಕೆಯಲ್ಲಿ 9 ವರ್ಷ, ಬೆಂಗಳೂರಿನ 'ಸುಧಾ' - 'ಮಯೂರ' ಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಸುಮಾರು ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಂತರವೂ, “ಉಷಾಕಿರಣ', 'ಓ ಮನಸೇ' ಪತ್ರಿಕೆಗಳಲ್ಲಿ ಕೆಲವು ವರ್ಷ ಕಾರ್ಯನಿರ್ವಹಿಸಿ, ಈಗ ಬರವಣಿಗೆ ಹಾಗೂ ಕೃಷಿಯನ್ನೇ ...

READ MORE

Related Books