ರೈತನಾಗುವ ಹಾದಿಯಲ್ಲಿ

Author : ಎಸ್.ಎಂ.ಪೆಜತ್ತಾಯ

Pages 144

₹ 100.00




Year of Publication: 2010
Published by: ದೇಸಿ ಪುಸ್ತಕ ಪ್ರಕಾಶನ
Address: ದೇಸಿ ಪುಸ್ತಕ ಪ್ರಕಾಶನ, #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಯಶಸ್ವೀ ರೈತರೊಬ್ಬರು ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ. ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜ ಜೀವನದ ಸಾಹಸಗಾಥೆಯನ್ನು ಸ್ವತಃ ರೈತ, ಲೇಖಕ ಪೇಜತ್ತಾಯ ಕಥೆಯಾಗಿಸಿದ್ದಾರೆ. ತಾವು ನಡೆದ ಹಾದಿಯಲ್ಲಿ ಎದುರಾದ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರೀತ್ಯಗಳು ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡಾ ತಿಳಿಹಾಸ್ಯದ ಲೇಪನವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು. 

About the Author

ಎಸ್.ಎಂ.ಪೆಜತ್ತಾಯ

ಎಸ್.ಎಂ.ಪೆಜತ್ತಾಯ-ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಒಂದು ಕಡೆ ಬಾಳೆಹೊಳೆ ಎಂಬ ಊರಿದ್ದರೆ ಮತ್ತೊಂದು ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭ  ದೊಡ್ಡದು. ಘಟ್ಟದ ಕೆಳಗೆ (ಶಿರೂರು), ಬಯಲುಸೀಮೆ(ಜಗಳೂರು) ಮತ್ತು ಮಲೆನಾಡು (ಸುಳಿಮನೆ) ಹೀಗೆ ಕರ್ನಾಟಕದ ಎಲ್ಲಾ ಪ್ರದೇಶದ ಕೃಷಿಪದ್ಧತಿಯ ಅರಿವು ಶ್ರೀಯುತರಿಗಿದೆ. ...

READ MORE

Related Books