ದೇವರುಗಳ ರಾಜ್ಯದಲ್ಲಿ

Author : ಬೊಳುವಾರು ಮಹಮದ್ ಕುಂಞ್

Pages 146

₹ 160.00
Year of Publication: 2020
Published by: ದೇಸಿ ಪುಸ್ತಕ ಪ್ರಕಾಶನ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040

Synopsys

ಹಿರಿಯ ಲೇಖಕ ಬೊಳುವಾರ ಮಹಮದ್ ಕುಂಞ್ ಅವರ ಕಥಾ ಸಂಕಲನ-ದೇವರುಗಳ ರಾಜ್ಯದಲ್ಲಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ಇದು. ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಯಾವುದೇ ಭಾಷೆಯ ಸೃಜನಶೀಲ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ಯಿ ಪಡೆದ ದೇಶದ ಏಕೈಕ ಸಾಹಿತಿ ಎಂಬ ದಾಖಲೆ ಬರೆದ ಬೊಳುವಾರು ಮಹಮದ್ ಕುಂಞ್‌, ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಪರಿಚಯಿಸಿದವರಲ್ಲಿ ಮೊತ್ತ ಮೊದಲಿಗರು. ಮನುಷ್ಯ ನಿರ್ಮಿತ ಎಲ್ಲ ಧರ್ಮಗಳ ಎಲ್ಲೆ ಮೀರಿದ ಚಿಂತನೆಗಳಿರುವ ಬೊಳುವಾರರ ಪ್ರತಿ ಕಥೆಯಲ್ಲೂ ಹೊಸತನವಿದೆ. ಉತ್ತರಿಸಲು ಕಷ್ಟಸಾಧ್ಯವಾಗುವ ನೂರಾರು ಪ್ರಶ್ನೆಗಳಿವೆ. 1985ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಕೃತಿಯ ಐದನೇ ಆವೃತ್ತಿ ಇದು. 

About the Author

ಬೊಳುವಾರು ಮಹಮದ್ ಕುಂಞ್
(22 October 1951)

ಕನ್ನಡದ  ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...

READ MORE

Awards & Recognitions

Related Books