ಸುವರ್ಣ ಸಂಪುಟ

Author : ಎಚ್. ದೇವೀರಪ್ಪ

Pages 131

₹ 1.00
Year of Publication: 1942
Published by: ಸಾಹಿತ್ಯ ಮಂದಿರ
Address: ಮೈಸೂರು

Synopsys

ಮೈಸೂರಿನ ತಳುಕಿನ ವೆಂಕಣ್ಣಯ್ಯ ನವರ ಸ್ಮಾರಕ ಗ್ರಂಥಮಾಲೆಯಡಿ ಎಚ್. ದೇವೀರಪ್ಪನವರ ‘ಸುವರ್ಣ ಸಂಪುಟ’ ಶೀರ್ಷಿಕೆಯ ಕಥಾ ಸಂಕಲನ ಪ್ರಕಟಿಸಲಾಗಿದೆ. ಜಯಕರ್ನಾಟಕ ಪತ್ರಿಕೆಯಲ್ಲಿ ಇಲ್ಲಿಯ ಬಹುತೇಕ ಕಥೆಗಳು ಪ್ರಕಟಗೊಂಡಿದ್ದವು. ಒಟ್ಟು 6 ಕಥೆಗಳಿರುವ ಈ ಸಂಕಲನದಲ್ಲಿ ಒಂದೆರೆಡು ಜೀವನ ಚಿತ್ರಗಳಿಗೆ ಸಂಬಂಧಿಸಿವೆ. ಶಿಷ್ಟ ಭಾಷೆ, ಕಥೆಯಲ್ಲಿ ಮಿಂಚುವ ಹಾಸ್ಯ, ವಿಷಯ ನಿರೂಪಣೆಗೆ ಗಾದೆಗಳ ಬಳಕೆ, ಹಳ್ಳಿಯ ಬದುಕಿನ ಸೂಕ್ಷ್ಮ ಅವಲೋಕನ, ರೈತರ ಹಾಗೂ ಮೂಕಪ್ರಾಣಿಗಳ ಬಗ್ಗೆ ಲೇಖಕರ ಸಹಾನುಭೂತಿ, ಕಥೆಗಾರನ ಕಥನ ಕಲೆ ಇವು ಇಲ್ಲಿಯ ಎಲ್ಲ ಕಥೆಗಳ ಆಕರ್ಷಣೆ ಹಾಗೂ ಗಟ್ಟಿತನ. ಸುವರ್ಣ ಸಂಪುಟ (ಇದು ಸಂಕಲನದ ಶೀರ್ಷಿಕೆಯೂ), ವಧುವಲ್ಲ..ವಿಧವೆ, ಹುಡುಗಾಟ, ನನ್ನ ಬಂಗಾರಿ, ಜೋಳಗುಮ್ಮಟ ಹಾಗೂ ಕೆಂಚ ಶಿವುಗರು ಹೀಗೆ ಆರು ಕಥೆಗಳಿವೆ.

About the Author

ಎಚ್. ದೇವೀರಪ್ಪ
(06 June 1913 - 03 January 1988)

ಕನ್ನಡ ಸಾಹಿತ್ಯ ಲೋಕದ ಸಂಶೋಧಕ ದಿಗ್ಗಜರೆಂದೇ ಖ್ಯಾತರಾಗಿರುವ ಎಚ್.ದೇವಿರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ (ಈಗ ದಾವಣಗೆರೆ ಜಿಲ್ಲೆ) ಮಲ್ಲಿಗೇನಹಳ್ಳಿಯಲ್ಲಿ ಜನಿಸಿದರು, ಶ್ರೇಷ್ಠ ಉನ್ನತ ಮಟ್ಟದ ಸಂಶೋಧಕರಾಗಿದ್ದಂತೆಯೇ ಒಳ್ಳೆಯ ಕಾದಂಬರಿಕಾರರೂ, ಕಲೆಗಾರರೂ, ಜೀವನ ಚರಿತ್ರಕಾರರೂ ಆಗಿದ್ದ ದೇವಿರಪ್ಪ ಅವರಿಗೆ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. 1975ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ ಪ್ರಶಸ್ತಿಯಲ್ಲಿ ಸಿರಿಗೆರೆಯ ತರಳಬಾಳು ಸಂಸ್ಥೆಯು ದೇವಿರಪ್ಪ ಅವರನ್ನು ವಿಶ್ವ ಮಾನವ ಪತ್ರವನ್ನು ನೀಡಿ ಗೌರವಿಸಿದೆ. ಹೊನ್ನಾಳಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಶ್ರೀ ಎಚ್. ದೇವೀರಪ್ಪ (1913-1988) ಅವರು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ...

READ MORE

Related Books