ಕಠಾರಿ ಕಥೆಗಳು

Author : ಚಂದ್ರಪ್ರಭ ಕಠಾರಿ

Pages 162

₹ 120.00




Year of Publication: 2012
Published by: ಕಿಕ್ಕೇರಿ ಪಬ್ಲಿಕೇಷನ್ಸ್
Address: ಎಲ್.ಪಿ. ಸುಮಂತ್ ಪುಟ್ಟಣ್ಣಯ್ಯ, #703, 14ನೇ ಕ್ರಾಸ್, ಚಂದ್ರ ಲೇಔಟ್, ವಿಜಯನಗರ, ಬೆಂಗಳೂರು - 560072.
Phone: 9449800858

Synopsys

ಲೇಖಕ ಚಂದ್ರಪ್ರಭ ಕಠಾರಿ ಅವರ ಕಥಾ ಸಂಕಲನ-ಕಠಾರಿ ಕಥೆಗಳು. ಲೇಖಕರು  ವೃತ್ತಿಯಿಂದ ಸಿವಿಲ್ ಇಂಜಿನಿಯರ್. ಹಾಗಾಗಿ, ಭೂಗಳ್ಳರಿಂದ, ಅತಿದುರಾಶೆಯ ಮಧ್ಯವರ್ತಿಗಳಿಂದ, ಅಮಾಯಕ ಗ್ರಾಹಕರಿಂದ, ಬಡಕೂಲಿಕಾರರಿಂದ ತುಂಬಿದ ಈ ಜಗತ್ತನ್ನು ಅವರು ಇಲ್ಲಿಯ ಹೆಚ್ಚಿನ ಕತೆಗಳಲ್ಲಿ  ಸಮರ್ಥವಾಗಿ ಚಿತ್ರಿಸಿದ್ದಾರೆ. ಬಹುಪಾಲು ಕತೆಗಳು ಮಹಾನಗರ ಬೆಂಗಳೂರಿನಲ್ಲೇ ರೂಪು ಪಡೆಯುತ್ತವೆ. ತತ್ರಾಪಿ ಬೆಂಗಳೂರಿನ ಮೆಜೆಸ್ಟಿಕ್ ಭಾಗದ ಸುತ್ತಮುತ್ತಲಿನ ಅಂದಿನ -ಇಂದಿನ ಬದುಕೇ ಈ ಕತೆಗಳಿಗೆ ಗ್ರಾಸ ಒದಗಿಸಿದೆ.

ಬೆಂಗಳೂರಿನ ಚರಿತ್ರೆಯಲ್ಲಿ ‘ಧರ್ಮಾಂಬುದಿ ಕೆರೆ’, ‘ಕಾಂಗ್ರೆಸ್ ಎಕ್ಝಿಬಿಷನ್’, ‘ಹಿರಣ್ಣಯ್ಯ ಮಿತ್ರ ಮಂಡಳಿಯ ಟೆಂಟ್ ನಾಟಕಗಳು’ ಇವುಗಳಿಗೆಲ್ಲ ವಿಶಿಷ್ಟಸ್ಥಾನವಿದೆ. ಹಿರಿಯರಿಗೆ ಈ ಹೆಸರುಗಳನ್ನು ಮೆಲುಕು ಹಾಕುವುದೇ ಒಂದು ಸಂಭ್ರಮ.ಅಂದಿನ ಆ ಜೀವನದ ಆ ನೆನಪುಗಳಲ್ಲಿ ಮೀಯುವುದೇ ಒಂದು ಹಬ್ಬ. ಕಠಾರಿಯವರ ಈ ಕತೆಗಳು, ಪ್ರಶಾಂತ ಜೀವನದ ಆ ನೆನಪುಗಳನ್ನು ಕೆದಕುತ್ತ-ಬದುಕಿನ ಈ ಹುಚ್ಚುಓಟದಲ್ಲಿ, ಇಂದಿನ ಬೆಂಗಳೂರ ರಾಕ್ಷಸಿ ಬಸ್ ನಿಲ್ದಾಣ, ಬಹುಮಹಡೀ ಮೆಜೆಸ್ಟಿಕ್, ಅಧ್ವಾನ ಅವೆನ್ಯೂರೋಡುಗಳ ಮುಖಹೀನ ರೊಬೋಟ್‍ ನಗರಿಗೆ ತಲುಪಿದ ಈ ಪರಿಯನ್ನು ಚಿತ್ರಿಸುತ್ತವೆ ಎಂದು ಸಾಹಿತಿ  ಶ್ರೀನಿವಾಸ ವೈದ್ಯ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಪ್ರಶಂಸಿದ್ದಾರೆ.

 

About the Author

ಚಂದ್ರಪ್ರಭ ಕಠಾರಿ

ಲೇಖಕ ಚಂದ್ರಪ್ರಭ ಕಠಾರಿ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ಕತೆ, ಕವನ, ನಾಟಕ ಬರೆಯುವುದು ಹವ್ಯಾಸ. ಕಠಾರಿ ಕತೆಗಳು ( ಇಲ್ಲಿಯ ಹಲವು ಕತೆಗಳು ಸಂಕ್ರಮಣ ಸಾಹಿತ್ಯ ಪತ್ರಿಕೆ, ಈ ಭಾನುವಾರ, ಕರ್ನಾಟಕ ಸಂಘ, ಮುಂಬೈ, ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೋಲ್ಮಿಂಚು, ಕಥಾ ಸರ್ಧೆಗಳಲ್ಲಿ ಬಹುಮಾನ ಪಡೆದಿವೆ.) ಮತ್ತು ಅಂಬು ( ನಾಟಕ) ಪ್ರಕಟವಾಗಿವೆ.  ...

READ MORE

Related Books