ಚೇತನಾ- ಕಥಾ ಸಂಕಲನ

Author : ಅನುಪಮಾ ಪ್ರಸಾದ್

Pages 98

₹ 50.00




Year of Publication: 2002
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಕೇರಳ ಗಡಿನಾಡ ಘಟಕ, ಕಾಸರಗೋಡು

Synopsys

‘ಚೇತನಾ’ ಲೇಖಕಿ ಅನುಪಮಾ ಪ್ರಸಾದ್ ಅವರ ಪ್ರಥಮ ಕಥಾ ಸಂಕಲನ. ಈ ಕೃತಿಗೆ ಕೇರಳ ಗಡಿನಾಡ ಘಟಕ ಕ.ಸಾ.ಪದ ಅಧ್ಯಕ್ಷೆಯಾಗಿದ್ದ ಡಾ.ಲಲಿತಾ ಯಸ್.ಯನ್. ಭಟ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ಸಾಮಾಜಿಕ ಜೀವನದ ವಾಸ್ತವಿಕ ಸ್ವರೂಪವನ್ನು, ನಿಜಜೀವನದ ಸತ್ಯಾಸತ್ಯತೆಯನ್ನು ಸಮರ್ಥವಾಗಿ, ಸಮರ್ಪಕವಾಗಿ ಲೇಖನಿಯಲ್ಲಿ ಹಿಡಿದಿಡಲು ಅನುಪಮಾ ಶಕ್ತರಾಗಿದ್ದಾರೆ. ಸರಳ ನಿರೂಪಣೆಯಿಂದ, ಭಾವುಕತೆಯಲ್ಲಿ ತೇಲಿಹೋಗದೆ ತನ್ನ ಶೈಲಿಯ ಇತಿ ಮಿತಿಗಳನ್ನು ಅರ್ಥೈಸಿಕೊಂಡ ಅವರ ರಚನೆಗಳು ಕಥೆಯಿಂದ ಕಥೆಗೆ ಬೆಳೆದು ನಿಂತಿವೆ ಎನ್ನುತ್ತಾರೆ. ಜೊತೆಗೆ ಹನ್ನೊಂದು ಕಥೆಗಳನ್ನು ಒಳಗೊಂಡ ಈ ಕಥಾಸಂಕಲನವು ಕೊಡಗಿನ ಗೌರಮ್ಮ ಸ್ಮಾರಕ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತವಾದ ಹಸಿವು ಕಥೆಯನ್ನೂ ಒಳಗೊಂಡಿದೆ. ಹಲವೆಡೆಗಳಲ್ಲಿ ನಡೆದ ನೈಜ ಘಟನೆಗಳು ಅನುಪಮಾ ಅವರ ಲೇಖನಿಯ ಮೂಲಕ ಕಥೆಯಾಗಿ ಇಳಇದುಬಂದಿವೆಯೇನೋ ಅನಿಸುತ್ತದೆ. ಆ ಕಥೆಗಳನ್ನು ಓದುವಾಗ ನಿನ್ನೆಯೊ ಮೊನ್ನೆಯೊ ಈ ಘಟನೆ ನಮ್ಮ ಪಕ್ಕದಲ್ಲೆಲ್ಲೋ ನಡೆದಿದೆಯಲ್ಲವೆ ಅನಿಸಿಬಿಡುತ್ತದೆ ಎಂದಿದ್ದಾರೆ. ಈ ಕೃತಿಯಲ್ಲಿ ಪರಿವರ್ತನೆ, ಕಥೆಯಲ್ಲ ವ್ಯಥೆ, ಚೇತನಾ, ಕೆನ್ನೀರು, ಮುರುಟಿದ ಚಿಗುರು, ಸಬ್ ಕೋ ಸನ್ಮತಿ ದೇ ಭಗವಾನ್, ಅನಿಕೇತನ, ಹಸಿವು, ಪಂಚಮದ ದನಿ, ದೇವರೇ ನನ್ನನ್ನು ಕ್ಷಮಿಸು ಕತೆಗಳು ಸಂಕಲನಗೊಂಡಿವೆ.

About the Author

ಅನುಪಮಾ ಪ್ರಸಾದ್
(07 October 1971)

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...

READ MORE

Related Books