ಹೊನ್ನಳ್ಳಿಯಲ್ಲೊಮ್ಮೆ

Author : ಗಂಗಾ ಪಾದೇಕಲ್

₹ 6.00
Year of Publication: 1984

Synopsys

ಲೇಖಕಿ ಗಂಗಾ ಪಾದೇಕಲ್ ಅವರ ಕೃತಿ ಹೊನ್ನಳ್ಳಿಯಲ್ಲೊಮ್ಮೆ. ಆದರ್ಶವೇ ತುಂಬಿ ತುಳುಕುತ್ತಿದ್ದ ಪ್ರಸಾದ್ ನ ಜೀವನ ಹೊನ್ನಳ್ಳಿಗೆ ಬಂದು ದುರಂತ ಅಂತ್ಯವಾದುದು ಹೇಗೆ?ಎಂಬುದು ತಿಳಿಯಲು ಹೊನ್ನಳ್ಳಿಯಲೊಮ್ಮೆ ಓದಲೇಬೇಕು.ಇಲ್ಲಿ ಕೊರಗರ ಜೀವನ, ಅವರ ಸಂಪ್ರದಾಯವಾದ "ಒತ್ತೆಕೋಲ" ಇದೆಲ್ಲದರ ಸುಂದರ ಪರಿಚಯವಿದೆ

About the Author

ಗಂಗಾ ಪಾದೇಕಲ್
(01 September 1948)

ಕತೆಗಾರ್ತಿ ಗಂಗಾ ಪಾದೇಕಲ್ ಅವರು 1948 ಸೆಪ್ಟೆಂಬರ್ 01 ರಂದು ಪುತ್ತೂರಿನಲ್ಲಿ ಜನಿಸಿದರು.  ಅವರ ಮೂಲ ಹೆಸರು ಗಂಗಾರತ್ನ ಅವರು ಓದಿದ್ದು ಏಳನೇ ತರಗತಿ. ತಂದೆ ಮುಳಿಯ ಕೇಶವಭಟ್, ತಾಯಿ ಮುಳಿಯ ಸರಸ್ವತಮ್ಮ. ಮುಂದೆ ತಂದೆ, ತಾಯಿ, ಅಣ್ಣ ಹಾಗೂ 35ರ ಪ್ರಾಯದಲ್ಲಿಯೇ ಪತಿ ಗೋವಿಂದ ಭಟ್ಟರನ್ನು ಕಳಕೊಂಡು ಇಬ್ಬರು ಎಳೆಯ ಹೆಣ್ಣುಮಕ್ಕಳೊಂದಿಗೆ ಬದುಕು ಕಟ್ಟಿಕೊಂಡ ಈ ಧೀಮಂತಿನಿ ಗಂಗಾ ಪಾದೇಕಲ್ ಅವರಿಗೆ ಸಂಗಾತಿಯಾಗಿ ಇದ್ದದ್ದು ಸಾಹಿತ್ಯದ ಓದು ಮತ್ತು ಬರವಣಿಗೆ.  ಪುತ್ತೂರಿನ ನರ್ಸಿಂಗ್‌ ಹೋಂನಲ್ಲಿ ಕಂಡ ದೃಶ್ಯವೇ ಇವರ 'ಜಾನಕಿಯ ಡೈರಿಯ ಕೆಲವು ಪುಟಗಳು' ಕಥಾವಸ್ತುವಾಗಿ ಮೂಡಿತು. ’ಪುಲಪೇಡಿ ಮತ್ತು ಇತರ ...

READ MORE

Related Books