ಪಾ.ವೆಂ. ಹೇಳಿದ ಕಥೆ

Author : ರವಿ ಬೆಳಗೆರೆ

Pages 168

₹ 150.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ರವಿ ಬೆಳಗೆರೆ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದಿತ್ತ ಕೃತಿಗಳಲ್ಲಿ ’ಪಾ.ವೆಂ. ಹೇಳಿದ ಕತೆ’ಯೂ ಒಂದು. ಕತೆ ಕೇಳುವಾಕೆಯೇ ಆ ಕತೆಯ ಪಾತ್ರವಾಗಿರುವ, ಆಕೆಯೇ ಕತೆಯ ಪಾತ್ರಧಾರಿ ಎಂದು ಕತೆ ಹೇಳುವವನಿಗೂ ಗೊತ್ತಿರುವ ವಿಶಿಷ್ಟ ಕೃತಿ ಇದು. ಕತೆ-ಹೇಳುವ- ಕತೆ ಕೇಳುವ ಕ್ರಿಯೆಯ ನಂತರ ಮುಂದೇನಾಗುತ್ತದೆ ಎನ್ನುವುದು ಕುತೂಹಲದ ಸಂಗತಿ. 

ಹಿರಿಯ ಚಿಂತಕ ಜಿ. ರಾಜಶೇಖರ ಅವರು ಕೃತಿಯ ಕುರಿತು ’ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು ಚರಿತ್ರೆ ನಿರ್ಮಿಸುವವರದ್ದಲ್ಲ...’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುನ್ನುಡಿ ಬರೆದಿರುವ  ಹಿರಿಯ ಕತೆಗಾರ ಕೆ. ಸತ್ಯನಾರಾಯಣ, ’...ಮನುಷ್ಯನ ಮನಸ್ಸು ಕಾಲಾಂತರದಲ್ಲಿ ಮಾಗುವ ಪಕ್ವವಾಗುವ ಹಣ್ಣಾಗುವ ಪರಿಯ ಸ್ವರೂಪ ಎಂಬುದನ್ನು ಇಲ್ಲಿಯ ಕಥೆಗಳು ತಮ್ಮ ವಸ್ತುವಿನಲ್ಲಿ ನಿಧಾನದಲ್ಲಿ, ಪುನರುಕ್ತಿಯಲ್ಲಿ, ವ್ಯಾಮೋಹದಲ್ಲಿ ವ್ಯಂಗ್ಯದಲ್ಲಿ ಹೇಳುತ್ತಾ ಹೋಗುತ್ತವೆ’ ಎಂದಿದ್ದಾರೆ. 

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books