ಅಬ್ಬೋಲಿ

Author : ಅಕ್ಷತಾ ಕೃಷ್ಣಮೂರ್ತಿ

Pages 102

₹ 100.00




Year of Publication: 2021
Published by: ಸಾಧನ ಪಬ್ಲಿಕೇಷನ್ಸ್
Address: # 15/16 ಶಿವ ಕಾಂಪ್ಲೆಕ್ಸ್‌, ಡಾ. ರಾಜ್‌ ಪ್ರತಿಮೆ ಎದುರು, ಬಳೇಪೇಟೆ ಮುಖ್ಯರಸ್ತೆ, ಬೆಂಗಳೂರು-53

Synopsys

ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಅವರ ಕತಾಸಂಕಲನ-ಅಬ್ಬೋಲಿ ಸಮೃದ್ಧತೆಯಿಂದ ಕೂಡಿದ ಕರಾವಳಿಯ ದಟ್ಟ ಕಾಡು ಬಹುತೇಕ ಕತೆಗಳ ಮೂಲ ಅಂಶವಾಗಿದೆ. ಈ ಕೃತಿಗೆ  ಮಂಗಳೂರಿನ ದಿನೇಶ ಹೊಳ್ಳ ಮುಖಪುಟ ಮಾಡಿರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಪರಿಸರ ಹಾಗೂ ಭಾಷೆಗಳನ್ನು ಕತೆಗಳಲ್ಲಿ ಬಿಗಿಯಾಗಿ ಬಂಧಿಸಿರುವುದು ಇಲ್ಲಿಯ ಕತೆಗಳ ವೈಶಿಷ್ಟ್ಯ ಆಗಿದೆ. ಕಾಡು ಕಣಿವೆಯ ಬದುಕು, ಮಳೆಗಾಲ ಮತ್ತು ಅಣಶಿ ಘಟ್ಟ ಇಲ್ಲಿಯ ಕತೆಗಳಿಗೆ ಮನುಷ್ಯ ಸಂಬಂಧವನ್ನು ಹೆಣೆಯಲಾಗಿದೆ. ಜೀವನಾನುಕಂಪ, ಮಣ್ಣಿನ ವಾಸನೆ ಹಾಗೂ ವಿಶಿಷ್ಟ ಭಾಷಾ ಪ್ರಯೋಗ ಈ ಕೃತಿಯಲ್ಲಿ ಎದ್ದು ತೋರುತ್ತದೆ. ಒಂದು ಪ್ರದೇಶದ ವೈವಿಧ್ಯಮಯ ಬದುಕು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಭರಾಟೆಯಲ್ಲಿ ಹೇಗೆ ಬದಲಾಗುತ್ತದೆ ಎನ್ನುವುದನ್ನು ಕಥೆಗಳು ಅಭಿವ್ಯಕ್ತಿಸುತ್ತವೆ. ಬಹುಪಾಲು ಕಥೆಗಳಲ್ಲಿ ಲೇಖಕಿ ನಮ್ಮ ದೈನಿಕದ ಸಹಜ ಲೋಕವನ್ನು ತೆರೆದಿಟ್ಟಿದ್ದಾರೆ. ಅನುಭವ ಲೋಕದ ಆರೋಗ್ಯ ಪೂರ್ಣ ಸೃಷ್ಟಿ ಈ ಕೃತಿಯದಾಗಿದ್ದು, ವಸ್ತುವಿನಲ್ಲೂ ವೈವಿಧ್ಯತೆ ತೋರುತ್ತದೆ. ತನ್ನತನವನ್ನು ಕಾಪಾಡಿಕೊಳ್ಳುವ ಹೆಣ್ಣು ಜೀವಗಳು ಆಳವಾದ ನೆಲಮುಖಿ ಸಂವೇದನೆಯನ್ನು ಮೈಗೂಡಿಸಿಕೊಂಡಿವೆ.

 

About the Author

ಅಕ್ಷತಾ ಕೃಷ್ಣಮೂರ್ತಿ
(02 November 1981)

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ...

READ MORE

Related Books