`ಕಥಾಚೈತ್ರ' ವಿಜಯ ಕರ್ನಾಟಕ ಪತ್ರಿಕೆಯ 2019ರ ಸಾಲಿನ ಯುಗಾದಿ ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ ಟಾಪ್ 25 ಕಥೆಗಳ ಸಂಕಲನ. ಈ ಕೃತಿ ಸಂಪಾದನೆ ಕಾರ್ಯದಲ್ಲಿ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ, ಶರಣು ಹುಲ್ಲೂರು, ಹ.ಚ.ನಟೇಶ್ ಬಾಬು, ಮಹಾಬಲೇಶ್ವರ ಕಲ್ಕಣೆ ಭಾಗಿಯಾಗಿದ್ದಾರೆ. ಈ ಕೃತಿಗೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಿಷಬ್ ಶೆಟ್ಟಿ ಬೆನ್ನುಡಿ ಬರೆದಿದ್ದಾರೆ. ಇಲ್ಲಿ ಹಿರಿಕಿರಿಯರ 25 ಸಣ್ಣಕಥೆಗಳಿವೆ.
ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯ ಉಪಸಂಪಾದಕಿ. ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ. ...
READ MORE