ಬೂದಿ ಮತ್ತು ಕೆಂಡ

Author : ಬಿ.ಆರ್‌. ಪೊಲೀಸ್‌ ಪಾಟೀಲ

Pages 144

₹ 130.00
Year of Publication: 2010
Published by: ಸಾಂಗತ್ಯ ಪ್ರಕಾಶನ
Address: 123, ವಿಶ್ವೇಶ್ವರಯ್ಯ ನಗರ, ಕಳಸಾಪೂರ ರಸ್ತೆ, ಗದಗ - 582103
Phone: 9448358040

Synopsys

ಲೇಖಕ ಬಿ.ಆರ್. ಪೊಲೀಸಪಾಟೀಲ ಅವರ ಕಥಾ ಸಂಕಲನ-ಬೂದಿ ಮತ್ತು ಕೆಂಡ. ಇಲ್ಲಿ ಒಟ್ಟು 18 ಕಥೆಗಳಿವೆ. ಮುನ್ನುಡಿ ಬರೆದಿರುವ ಸಾಹಿತಿ ನಲ್ಲೂರು ಪ್ರಸಾದ್ ಆರ್‌. ಕೆ. ಅವರು “ಜಾನಪದ, ಪೊಲೀಸ್‌ ಪಾಟೀಲರ ಸಾಹಿತ್ಯದ ಜೀವಾಳ. ಅಂತೆಯೇ ಇಲ್ಲಿಯೂ ಅದು ಎಲ್ಲ ನಿರೂಪಣೆ, ವಿಶ್ಲೇಷಣೆಗಳಲ್ಲಿ ಅಂತರ್ಗತವಾಗಿ ಪ್ರವಹಿಸಿದೆ, ಸಂಭಾಷಣೆ ಕತಾಹಂದರ, ಪ್ರಮುಖ ಪಾತ್ರಗಳು ಎಲ್ಲವೂ ಜಾನಪದದ ಮೂಲ ಅಥವಾ ತಾಯಿ ಬೇರಿನ ಹೊಸ ಚಿಗುರುಗಳೆ” ಎಂದು ಪ್ರಶಂಸಿಸಿದ್ದಾರೆ. 

About the Author

ಬಿ.ಆರ್‌. ಪೊಲೀಸ್‌ ಪಾಟೀಲ

ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್‌ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...

READ MORE

Related Books