‘ಒಂದು ಇಡಿಯ ಬಳಪ’ 2021ನೇ ಸಾಲಿನ ಮೈತ್ರಿ ಪುಸ್ತಕ ಪ್ರಕಾಶನದ ಕಥಾಸ್ಪರ್ಧೆಯಲ್ಲಿ ಆಯ್ಕೆಗೊಂಡು ಪ್ರಕಟವಾದ ಸುಧಾ ಆಡುಕಳ ಅವರ ಕೃತಿ. ಸ್ಫರ್ಧೆಯ ತೀರ್ಪುಗಾರ್ತಿ ಲೇಖಕಿ ಎಲ್.ಸಿ. ಸುಮಿತ್ರಾ ಅವರು ಕೃತಿಯ ಕುರಿತು ‘ಒಂದು ಇಡಿಯ ಬಳಪ ಕೃತಿಯಲ್ಲಿನ ಕತೆಗಳು, ವಸ್ತು, ಭಾಷೆ ಹಾಗೂ ನಿರೂಪಣೆಯ ದೃಷ್ಟಿಯಿಂದ ಹೆಚ್ಚು ತೀವ್ರವಾಗಿದೆ. ಸೃಜನಶೀಲತೆಯಿಂದ ಕೂಡಿದ ಅಭಿವ್ಯಕ್ತಿಗಳನ್ನು ಹೊಂದಿದ ಈ ಕತೆಗಳು ಸುಲಭವಾಗಿ ಓದಿಸಿಕೊಳ್ಳುತ್ತವೆ. ಸುಮಿತ್ರ. ಹಾಗೇ ಶೀರ್ಷಿಕೆಯ ಕತೆ ಒಂದು ಇಡಿಯ ಬಳಪ ಹೆಣ್ಣಿನ ಬದುಕಿಗೆ ಒಂದು ರೂಪಕವಾಗಿದೆ. ಕತೆಯ ನಿರೂಪಕಿಗೆ ಒಂದು ಇಡಿಯ ಬಳಪ ಬಾಲ್ಯದಲ್ಲಿ ಸಿಗುವುದಿಲ್ಲ. ಸಿಕ್ಕರೂ ದಕ್ಕಿಸಿಕೊಳ್ಳಲು ಕಷ್ಟವಾದ ಸನ್ನಿವೇಶ, ಈ ಕತೆಯ ದೇವಿ ಹಾಗೂ ಸ್ವತಃ ನಿರೂಪಕಿ ನಾರಿ ಜಗತ್ತಿನ ಕಷ್ಟ ನಿಷ್ಠುರಗಳಿಗೆ ಪ್ರತೀಕವಾಗಿದ್ದಾರೆ ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಂದು ಇಡಿಯ ಬಳಪ, ಪಾರಿಜಾತ, ಗೆಳತಿ ಭಾನುಮತಿ, ಹೊಳೆ, ಮೊಳಕೆ, ನೀಲಿಯ ಜಗತ್ತು, ಸತ್ಯದ ಬದುಕು, ದೇವೀರಮ್ಮ, ಶಿಖಂಡಿಯ ಸ್ವಗತ, ಅಕ್ರಮ-ಸಕ್ರಮ, ಕಥೆಯನ್ನರಸುತ್ತಾ ಸೇರಿದಂತೆ 10 ಕಥೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಸುಧಾ ಆಡುಕಳ ಅವರು ಮೂಲತಃ ಉಡುಪಿಯವರು. ಅವಧಿ ಸೇರಿದಂತೆ ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಸುಧಾ ಅವರು 'ಬಕುಲದ ಬಾಗಿಲಿನಿಂದ' ಎಂಬ ಲೇಖನ ಸಂಕಲನವನ್ನು ಪ್ರಕಟಿಸಿದ್ದಾರೆ. ಯಶವಂತನ ಯಶೋಗೀತೆ, ಹದಿಹರೆಯದ ಕನಸುಗಳೊಂದಿಗೆ, ಮಗುವಿನ ಭಾಷೆ ಮತ್ತು ಶಿಕ್ಷಕ, ಮಕ್ಕಳ ಟ್ಯಾಗೋರ್ ಅವರ ಮತ್ತಿತರ ಕೃತಿಗಳು. ಅವರಿಗೆ 2019ನೇ ಸಾಲಿನ ಅಮ್ಮ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪ್ರಶಸ್ತಿ, ಉಡುಪಿಯ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಬಕುಲದ ಬಾಗಿಲಿನಿಂದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. ...
READ MORE