ವೃತ್ತಿಯಿಂದ ಕೃಷಿ ವಿಜ್ಞಾನಿಯಾಗಿ ಪ್ರವೃತ್ತಿಯಿಂದ ಬರಹಗಾರ, ಕಾದಂಬರಿಗಾರ, ಲೇಖಕರಾದ ಡಾ. ಕೆ.ಎನ್. ಗಣೇಶಯ್ಯ ಅವರ ಸಣ್ಣ ಕತೆಗಳ ಸಂಗ್ರಹ ’ಶಾಲ ಭಂಜಿಕೆ’.
ಇಲ್ಲಿರುವ ಅನೇಕ ಕತೆಗಳು ನೈಜ ಘಟನೆಗಳಿಂದ ಮತ್ತು ವಸ್ತುಗಳಿಂದ ಹೆಣೆಯಲಾಗಿದೆ. ಸತ್ಯ ಮತ್ತು ಕಲ್ಪನೆಗಳು ಸ್ವಾಭಾವಿಕವಾಗಿ ಕತೆಗಳಲ್ಲಿ ಬೆರೆತು ಹೋಗಿರುವುದನ್ನು ಗಮನಿಸಬಹುದು. ವಿಜ್ಞಾನಿಯೊಬ್ಬ ತನ್ನ ಸಂಶೋಧನಾ ಕ್ಷೇತ್ರದ ಮಾಹಿತಿಗಳನ್ನೇ ರೋಚಕವೆನಿಸುವಷ್ಟು ಕಥಾ ರೂಪಕ ನಿರಂತರವಾಗಿ ಈ ಕೃತಿಯಲ್ಲಿ ಸಾಗುತ್ತವೆ. ಇತಿಹಾಸದಲ್ಲಿ ಅಡಗಿದ ಸಂಗತಿಗಳನ್ನು ಹೊರತೆಗೆದು ವರ್ತಮಾನದೊಂದಿಗೆ ಬೆರೆಸಿ ಕಲಾತ್ಮಕವಾಗಿ ಈ ಕೃತಿಯನ್ನು ಹೆಣೆಯಲಾಗಿದೆ.