ಅಗರ್ತ

Author : ಗುರುಪಾದ ಬೇಲೂರು (ಗುರುಪಾದ ಸ್ವಾಮಿ ಬಿ.ಜಿ.)

Pages 184

₹ 130.00
Year of Publication: 2015
Published by: ಕಣ್ವ ಪ್ರಕಾಶನ
Address: ಕಾಲ ಕನಸು,894, 1ನೇ ಮೈನ್, ನಿಸರ್ಗ ಬಡಾವಣೆ ಚಂದ್ರಾ ಲೇಔಟ್, ಬೆಂಗಳೂರು.
Phone: 9845052481

Synopsys

ಅಗರ್ತ, ಒಡಲಾನಲ, ಯೋಗೇಂದ್ರ ಎಂಬ ಪ್ರಮುಖ ನೀಳ್ಗತೆಗಳನ್ನು  ಈ ಕಥಾಸಂಕಲನ ಒಳಗೊಂಡಿದೆ.

ನಿಸರ್ಗವು ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ಅನೇಕ ರಹಸ್ಯಗಳನ್ನು  ಮನುಷ್ಯನು ಹುಡುಕಹೊರಟರೆ, ಭೂಮಿಯ ಅಂತರಾಳದಲ್ಲಿ ಇರುವ ಗುಹೆಗಳು ನೂರಾರು ಕಥೆ ಹೇಳಬಲ್ಲವು. ಇಂತಹ ಗವಿಗಳ ಅನ್ವೇಷಕರ ಪರಿಣಿತ ತಂಡವೊಂದು, ಆಕಸ್ಮಿಕವಾಗಿ ಚಿತ್ರದುರ್ಗದ ಗವಿಗಳ ಶೋಧನೆಗೆ  ಇಳಿಯುವುದು, ಅಲ್ಲಿ ಅವರು ಎದುರಿಸುವ ರೋಚಕ ಪ್ರಸಂಗಗಳು, ಕಂಡುಕೊಂಡ ಹೊಸ ಜಗತ್ತಿನ ಚಿತ್ರಣವೇ ಅಗರ್ತ.

ಒಡಲಾನಲದಲ್ಲಿ  ಭೂಮಿಯ ಅಂತರಾಳದಲ್ಲಿರುವ  ಲಾವರ ಸವನ್ನು ಬಳಸಿ ಶಕ್ತಿಯನ್ನು ಉತ್ಪಾದಿಸುವ ಕನಸು ಕಂಡ ವಿಜ್ಞಾನಿಗಳ  ಸಾಹಸಗಾಥೆಯನ್ನು ವಿವರಿಸಲಾಗಿದೆ.

ಯೋಗೇಂದ್ರ ಕಥೆಯು  ಸಾಮಾಜಿಕ ಹಿನ್ನಲೆಯಲ್ಲಿದ್ದು , ತನ್ನ ಹುಟ್ಟಿನ ರಹಸ್ಯ ತಿಳಿಯಲು ಹೊರಟ ಯೋಗೇಂದ್ರ ಎದುರಿಸ ಬೇಕಾದ  ಸನ್ನಿವೇಶಗಳ ಕಥೆ. ಸಾಮಾಜಿಕ ಸಮಸ್ಯೆಯೊಂದನ್ನು ಮೆಲ್ಲನೆ ಕೆದಕುವ ಕಥೆ, ಪತ್ತೆದಾರಿಕೆ ಅಂಶಗಳಿಂದಾಗಿ ಗಮನ ಸೆಳೆಯುತ್ತದೆ.

About the Author

ಗುರುಪಾದ ಬೇಲೂರು (ಗುರುಪಾದ ಸ್ವಾಮಿ ಬಿ.ಜಿ.)
(13 April 1961)

’ಗುರುಪದಾ ಬೇಲೂರ’ ಶ್ರೀ ಗುರುಪದಾಸ್ವಾಮಿ ಬಿ ಜಿ ಅವರ ಕಾವ್ಯನಾಮ.  ವೃತ್ತಿಯಿಂದ ಸರ್ಕಾರಿ ಇಂಜಿನಿಯರ್‌ ಆಗಿರುವ ಗುರುಪಾದ ಸ್ವಾಮಿಯವರ ಹಲವು ಸಣ್ಣ ಕಥೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಅವರು ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಕಾರಗಳನ್ನು ವಿಕೇಂದ್ರೀಕರಣ ಮಾಡುವ ಹಿಂದಿನ ಉಪಕ್ರಮಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ಗ್ರಾಮೀಣ ಸಂಪರ್ಕ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದರು. ಅವರು ವಾಟರ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇಂಟಿಗ್ರೇಟೆಡ್ ವಾಟರ್ ಸಂಪನ್ಮೂಲ ನಿರ್ವಹಣಾ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ. ಗುರುಪಾದ ಸ್ವಾಮಿಯವರು ತನ್ನ ಕೆಲಸದ ಅನುಭವಗಳನ್ನು ...

READ MORE

Related Books