ಲೇಖಕಿ ಮೇಘನಾ ಸುಧೀಂದ್ರ ಅವರ ಕೃತಿ- # AI ಕಥೆಗಳು. AI ಎಂದರೆ ಕೃತಕ ಬುದ್ದಿಮತ್ತೆ (Artificial Intelligence). ಆಧುನಿಕ ತಂತ್ರಜ್ಞಾನದ ಭರಾಟೆ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಹೆಚ್ಚುತ್ತಿದೆ. ಮನುಷ್ಯ ತನ್ನ ಕೆಲಸದ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಕಲ್ಪನೆಯ ಕಥೆಗಳು ಕೇವಲ ಭಾವಪ್ರಧಾನ ವಾಗದೇ ತಂತ್ರಜ್ಞಾನದ ಬಳಕೆಯ ಅಂಶಗಳೂ ಸಹ ಕಥೆಗಳಲ್ಲಿ ಪ್ರಧಾನ ಪಾತ್ರ ಪಡೆಯುತ್ತಿವೆ. ಇಂತಹ ಸಂಗತಿಗಳನ್ನು ಒಳಗೊಂಡ ಕಥೆಗಳು ಇಲ್ಲಿ ಸಂಕಲನಗೊಂಡಿವೆ.
ಮೇಘನಾ ಸುಧೀಂದ್ರ ಯುವ ಬರಹಗಾರರು. ಹುಟ್ಟಿದ್ದು ಕತ್ತರಿಗುಪ್ಪೆ ಗ್ರಾಮ, ಮೂಲತಃ ಜಯನಗರ , ಬೆಂಗಳೂರಿನವಳು. ಓದಿದ್ದು Master of Science in Artificial Intelligence and Signal Processing ದೂರದ ಬಾರ್ಸಿಲೋನಾದಲ್ಲಿ. ತಮ್ಮ ಓದಿನ ದಿನಗಳಲ್ಲಿದ್ದಾಗಲೇ ಒನ್ ಇಂಡಿಯಾದಲ್ಲಿ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳನ್ನು ಅಂಕಣ ರೂಪದಲ್ಲಿ "ಜಯನಗರದ ಹುಡುಗಿ" ಎಂಬ ಬರೆದು ನಿರ್ವಹಣೆ ಮಾಡುತ್ತಿದ್ದರು. ಸಂಯುಕ್ತ ಕರ್ನಾಟಕದ ಸುದ್ದಿ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತರಾದ ಹೆಚ್ ಆರ್ ನಾಗೇಶರಾವ್ ಅವರ ಮೊಮ್ಮಗಳಾಗಿ ಅವರಿಂದ ಆದರ್ಶ, ಕನ್ನಡ ಭಾಷೆಯ ಬಗ್ಗೆ , ಓದಿನ ಶಿಸ್ತಿನ ಬಗ್ಗೆ ಅರಿವು ಮೂಡಿಸಿಕೊಂಡಿದ್ದ ಮೇಘನಾ ಅವರು ಸದ್ಯಕ್ಕೆ ...
READ MORE