ಕತೆಗೂ ಊರಿಗೂ ಅಪಾರ ನಂಟು

Author : ಸಂತೆಕಸಲಗೆರೆ ಪ್ರಕಾಶ್‌

Pages 344

₹ 175.00
Year of Publication: 2009
Published by: ಜ್ಯೋತಿ ಪ್ರಕಾಶನ
Address: ವಿವೇಕನಂದ ಸರ್ಕಲ್‌ ಮೈಸೂರು 570023

Synopsys

ಕತೆಗೂ ಊರಿಗೂ ಅಪಾರ ನಂಟು ಸಂತೆಕಸಲಗೆರೆ ಪ್ರಕಾಶ್ ಅವರ ಕಥೆ ಸಂಕಲವಾಗಿದೆ ಕಟ್ಟಿಕೊಂಡ ಕನಸುಗಳಿಗೆ ಬೆಚ್ಚನೆಯ ಉಸಿರು ಹುಟ್ಟಿದ ಹಳ್ಳಿ, ಗಳಿಸಿದ ಅನುಭವ, ಕಟ್ಟಿಕೊಂಡ ಕನಸುಗಳು, ಅಯ್ಯನ ಹಸಿರು ತ್ತಾಣದಿಂದ ಹತ್ತಾರು ಜೀವ ಬದುಕಿದ ನಿಟ್ಟುಸಿರು. ಅಮ್ಮನ ಆರೈಕೆ, ಸದಾ ಜಗಲಿ ಮೇಲೆ ಕೈ ಹಿಡಿದು ರೇಖೆಗಳ ಲೆಕ್ಕಾಚಾರದಲ್ಲಿ ಭವಿಷ್ಯದ ಮಾತುಗಳು. ಆಗ ದಿಗಿಲುಗೊಂಡವರಿಗೆ ಅಯ್ಯ ಹುಟ್ಟಿಸುತ್ತಿದ್ದ ಬದುಕಿನ 'ಭರವಸೆ' ಮಾತುಗಳು, ಊರಿನಲ್ಲಿ ವರ್ಷಕ್ಕೆ ಮೂರು ಬಾರಿ ನಡೆಯುವ ಜಾತ್ರೆಗಳು, ಹಬ್ಬ ಹರಿದಿನಗಳು, ವೈಭವದ ಸಾಂಸ್ಕೃತಿಕ, ಜಾನಪದೀಯ ಆಚರಣೆಗಳು ಮತ್ತಷ್ಟು ಕುತೂಹಲವನ್ನು ಮೂಡಿಸಿದವು. ಎದೆ ತುಂಬ ಕಟ್ಟಿಕೊಂಡ ಕನಸುಗಳು ಬಾಧಿಸುವ ಹುಚ್ಚುತನದ ಮನಸ್ಸಿನಿಂದಾಗಿ ಹೊರಬಿದ್ದ ಅಕ್ಷರಗಳನ್ನ ನಾನು 'ಸಾಹಿತ್ಯ' ಎ೦ದು ನಂಬಿಕೊಂಡಿದ್ದ ಮೊದಮೊದಲು ನೇರ ಮತ್ತು ದಿಟ್ಟತನದಲ್ಲಿ ಬರೆಯಬೇಕೆಂದು ಹಂಬಲಿಸಿದೆ. ನನ್ನ ಪ್ರಾಯದ ರಕ್ತಶ್ರಾಣದಿಂದ ಅಂದು ಕೊಂಡಿದ್ದಿರಬಹುದು. ನಂತರದಲ್ಲಿ ಹೆಚ್ಚಿನ ಓದು ಮತ್ತು ಮನನ, ಅಧ್ಯಯನದಿಂದ ಮನಸು ಮಾಗಿತು, ಆ ನಂತರ ಹುಟ್ಟಿದ ಕಥೆಗಳನ್ನು ಗಂಭೀರ ಕಥೆಗಳೆಂದು ಭಾವಿಸಿದ್ದೇನೆ. ಎಂದು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books