ಕರಗಿ ಹೋದವಳು

Author : ಸಂತೆಕಸಲಗೆರೆ ಪ್ರಕಾಶ್‌

Pages 119

₹ 60.00




Year of Publication: 2002
Published by: ಆದರ್ಶ ಪ್ರಕಾಶನ
Address: ಪಂಡಿತ ತಾತಯ್ಯನವರ ಮನೆ , ಮಂಡ್ಯ 571403

Synopsys

ಕರಗಿ ಹೋದವಳು ಸಂತೆಕಸಲಗೆರೆ ಪ್ರಕಾಶ್‌ ಅವರ ಕಥಾ ಸಂಕಲನ. ಗ್ರಾಮ ಸಮಾಜವೆಂದರೆ ಬಡತನ, ಶೋಷಣೆ ಮಾತ್ರವಲ್ಲ ಅದನ್ನರಿಯದೆಯೇ ಅವರದೇ ಸಂಭ್ರಮವ ಘಟನೆ ಕೂಡ. ಗ್ರಾಮ ಸಮಾಜ ಅತ್ಯಂತ ಸಂಕೀರ್ಣವಾದುದು, ಅಲ್ಲಿಯ ಬಡತನ ಬಡತನದಂತಲ್ಲ, ಹಾಗೆಯೇ ಅವರು ಅನುಭವಿಸುವ ಸಂತೋಷ ಸಂಭ್ರಮವೂ ಕೂಡ ಶಾಶ್ವತವಾದುದಲ್ಲ ಎಂದು ಅವರಿಗೆ ಗೊತ್ತಿದೆ. ಹೀಗಾಗಿಯೇ ಗ್ರಾಮ ಜೀವನ ಗ್ರಾಮಸ್ಥರಿಗೆ ಪಟ್ಟಣದವರಿಗಿಂತ ಅತ್ಯಂತ ಸಹ್ಯವಾಗಿಯೇ ಇದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಲೇಖಕರು ಅವನ್ನೆಲ್ಲಾ ಅರಿಯಬೇಕಾಗುತ್ತದೆ. ಪ್ರಕಾಶ್‌ರವರೆಗೆ ಗ್ರಾಮ ಸಮಾಜದ ದಟ್ಟ ಅನುಭವಗಳು ಇರುವುದು ಈ ಸಂಕಲನದಿಂದ ಸ್ಪಷ್ಟವಾಗಿಯೇ ಗೋಚರಿಸುತ್ತವೆ. ಅದರ ಎಲ್ಲ ಮಗ್ಗುಲುಗಳನ್ನು ಕಲಾತ್ಮಕವಾಗಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರೊ.ಡಿ.ಲಿಂಗಯ್ಯ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books