ಮಾನ ಮತ್ತು ಇತರ ಕಥೆಗಳು

Author : ಹರಿಯಪ್ಪ ಪೇಜಾವರ

Pages 172

₹ 45.00




Year of Publication: 1996
Published by: ಸವಿ ಪ್ರಕಾಶನ
Address: ಸವಿ ಪ್ರಿಂಟರ್ಸ್, ಪಬ್ಲಿಷರ್ಸ್, ಪ್ಯಾಕೇಜಿಂಗ್ ಇಂಡಸ್ಟ್ರೀಸ್, ಕೈಗಾರಿಕಾ ಸಂಕೀರ್ಣ, ಕೋಟೇಶ್ವರ, ಕುಂದಾಪುರ ತಾಲೂಕು- 576222

Synopsys

‘ಮಾನ ಮತ್ತು ಇತರ ಕಥೆಗಳು’ ಹಿರಿಯ ಲೇಖಕ ಹರಿಯಪ್ಪ ಪೇಜಾವರ ಅವರ ಕಥಾಸಂಕಲನ. ಈ ಕೃತಿಗೆ ಯಶವಂತ ಚಿತ್ತಾಲ ಹಾಗೂ ಸಿ.ಎನ್. ರಾಮಚಂದ್ರನ್ ಅವರು ಬೆನ್ನುಡಿ ಬರೆದಿದ್ದಾರೆ. ‘ಪ್ರಬಂಧ ಹಾಗೂ ಕತೆ ಈ ಸಾಹಿತ್ಯ ಪ್ರಕಾರಗಳನ್ನು ಒಂದಕ್ಕೊಂದು ಹತ್ತಿರ ತಂದು ಅವುಗಳ ಸಾಧ್ಯತೆಗಳನ್ನು ಹಿಗ್ಗುಸುವ ಇಲ್ಲಿಯ ಪ್ರಯತ್ನ ಕೌತುಕಾಸ್ಪದವಾಗಿದೆ’ ಎಂದಿದ್ದಾರೆ ಯಶವಂತ ಚಿತ್ತಾರರು.

ನೆನಪುಗಳ ರೂಪದಲ್ಲಿ ಕಾಡುವ ಅನುಭವಗಳು ವೈಚಾರಿಕ ನೆಲೆಯಲ್ಲಿ ಮರು ಪರೀಕ್ಷೆಗೆ ಒಳ ಪಡುತ್ತಿದ್ದಂತೆ ತಮ್ಮ ಕಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತ ತೆಗೆದುಕೊಳ್ಳುವ ಹೊಸ ವಿನ್ಯಾಸವೇ ಕತೆಯ ಶಿಲ್ಪವಾಗುವ ವಿಧಾನ ಹರಿಯಪ್ಪ ಅವರ ಕತೆಗಾರಿಕೆಯ ವೈಶಿಷ್ಟ್ಯವಾಗಿದೆ. ಅತಿಭಾವುಕತೆಗೆ ಎಡಗೈದಿರದ ಇವುಗಳ ನೇರ ಕಥನದ ಧಾಟಿ, ಶಬ್ದಗಳ ದುಂದು ಇಲ್ಲದ ನಿರಾಡಂಬರ ಭಾಷೆ ಹರಿಯಪ್ಪ ಅವರ ಮೊದಲ ಸಂಕಲನದಲ್ಲೇ ಸಾಧಿಸಿದ್ದು, ಅವರ ಕತೆಗಾರಿಕೆಗೆ ಒಳ್ಳೆಯ ಭವಿಷ್ಯ ನುಡಿಯುವ ಸಂಗತಿಯಾಗಿದೆ  ಎಂದು ವಿಮರ್ಶಕ ಸಿ.ಎನ್. ರಾಮಚಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ. 

About the Author

ಹರಿಯಪ್ಪ ಪೇಜಾವರ

ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್  ಅಧ್ಯಾಪಕರಾಗಿದ್ದಾರೆ.  ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016).  ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ...

READ MORE

Related Books