ನೂರೆಂಬತ್ತನೇ ಡಿಗ್ರಿ- 180

Author : ನಾಗರಾಜ ವಸ್ತಾರೆ

Pages 175

₹ 225.00
Year of Publication: 2017
Published by: ಸಾಂಚಿಮುದ್ರೆ
Address: 712, 14ಎಂ, 20ಸಿ, ಬಿ.ಎಸ್.ಕೆ ಸ್ಟೇಜ್, ಬೆಂಗಳೂರು- 560070
Phone: 08026718609

Synopsys

‘ನೂರೆಂಬತ್ತನೇ ಡಿಗ್ರಿ- 180’ ಲೇಖಕ ನಾಗರಾಜ ವಸ್ತಾರೆ ಅವರ ಕಥಾ ಸಂಕಲನ. ಕನ್ನಡದಲ್ಲಿ ಕಟುವಾದ ಅರ್ಬನ್ ಸಂವೇದನೆಗಳ ಮೂಲಕ ಗುರುತಿಸಿಕೊಂಡಿರುವ ಲೇಖಕ. 2016ರವರೆಗೆ ಅವರು ಬರೆದ ಇಪ್ಪತ್ತೆಂಟು ಕಥೆಗಳನ್ನು 90, 180 ಮತ್ತು 270 ಡಿಗ್ರಿಗಳೆಂದು ಕರೆಯಲಾಗುತ್ತಿದ್ದು, ಸರಣಿಯಲ್ಲಿಯ ಎರಡನೆಯ ಪುಸ್ತಕವು ಇದಾಗಿದೆ. 

About the Author

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books