ಭೂತದ ಕತೆಗಳು

Author : ವಿ.ಗಣೇಶ್‌

Pages 160

₹ 150.00




Year of Publication: 2021
Published by: ಸಾಧನ ಪಬ್ಲಿಕೇಷನ್ಸ್‌
Address: ಬೆಂಗಳೂರು
Phone: 9480088960

Synopsys

‘ಭೂತದ ಕತೆಗಳು’ ವಿ.ಗಣೇಶ್‌ ಅವರ ಕಥಾಸಂಕಲನವಾಗಿದೆ. ಅನಾದಿಕಾಲದಿಂದಲೂ ಈ ಭೂತದ ಕಥೆಗಳು ಬಾಯಿಂದ ಬಾಯಿಗೆ ಹರಡುತ್ತಾ ಬಂದಿರುವ ಕಥೆಗಳು, ಈ ಕಥೆಗಳು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಹೇಳಲು ಸಾಧ್ಯವಿಲ್ಲ, ಆದರೆ ಕಥೆಗಳಂತೂ ಬಾಯಿಂದ ಬಾ‌ಯಿಗೆ ಹರಡುತ್ತ ಇರುವುದು ನಿಜ, ಈ ಸಂಕಲನದಲ್ಲಿ ನಾನು ಓದಿರುವ, ಬೇರೆ ಕೃತಿಗಳಲ್ಲಿ ಬರೆದಿರುವ ಕಥೆಗಳನ್ನು ಅಳವಡಿಸಿಕೊಂಡು ಬರೆದಿದ್ದೇನೆ, ಕೆಲವೊಂದು ಇಂಗ್ಲಿಷ್ ಕಥೆಗಳನ್ನು ಆಲಿಸಿ ಅವುಗಳಿಗೆ ಕನ್ನಡದ ಹೊದಿಕೆಯನ್ನು ಕೊಟ್ಟದ್ದೇನೆ, ಆರ್.ಕೆ. ನಾರಾಯಣ್ ಹಾಗೂ ಮೊಪಾಸರವರ ಕಲವು ಕಥೆಗಳಲ್ಲಿ ಭೂತಗಳು ಪಾಲಿಸುವ ನೀತಿಗಳ ಹಾಗೂ ಪ್ರಾಮಾಣಿಕತೆಗಳ ಅರಿವಾಗುತ್ತದೆ. ಅದಕ್ಕಾಗಿ ಕೆಲವು ಕಥೆಗಳಲ್ಲಿ ಅವು ಹೇಗೆ ತಮ್ಮ ಪ್ರಾಣವನ್ನೇ ಬಲಿ ಕೊಡುತ್ತವೆ ಎಂಬುದನ್ನು ಕಾಣಬಹುದು. ಭೂತಗಳೇ ಆದರೂ ಮಾನವರಂತೆ ಹೇಗೆ ಅವುಗಳು ಕಷ್ಟ-ಸುಖಗಳನ್ನು ಎದುರಿಸುತ್ತವೆ ಹಾಗೂ ತಾವು ಮುಕ್ತಿ ಹೊಂದುವುದಕ್ಕೆ, ಹಾಗೂ ಋಣಮುಕ್ತರಾಗಲು ಹೇಗೆ ಪ್ರಯತ್ನಿಸುತ್ತವೆ ಎಂಬುದನ್ನು ಕಾಣಬಹುದು. ಒಟ್ಟಿನಲ್ಲಿ ಈ ಕಥೆಗಳನ್ನು ಓದುವುದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಯುತ್ತದೆ. ಚಂದಮಾಮ, ಬಾಲಮಿತ್ರ ಮುಂತಾದ ಮಕ್ಕಳ ಕಥೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಜೊತೆಗೆ ಇಂತಹ ಕಥೆಗಳನ್ನೂ ಓದುವುದರಿಂದ ಓದುವ ಅಭ್ಯಾಸಕ್ಕೆ ಸಹಕಾರಿಯಾಗುತ್ತದೆ ಎಂದು ಭಾವಿಸುತ್ತೇನೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books