ಸೆಕೆಂಡ್ ಇನ್ನಿಂಗ್ಸ್

Author : ಗೀತಾ ಬಿ.ಯು

Pages 168

₹ 130.00




Year of Publication: 2016
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 080-22443996

Synopsys

ಗೀತಾ ಬಿ.ಯು ಅವರ ಕಥಾ ಸಂಕಲನ ‘ಸೆಕೆಂಡ್ ಇನ್ನಿಂಗ್ಸ್’. ಈ ಕೃತಿಯಲ್ಲಿ 17 ಕಥೆಗಳು ಹಾಗೂ ಒಂದು ಕವನವಿದೆ. ವೃದ್ಧಾಪ್ಯ, ಸಂಬಂಧಗಳು, ಸ್ವಾರ್ಥ, ಆಸ್ತಿ, ಹಕ್ಕು ಬಾಧ್ಯತೆಗಳು ಈ ಎಲ್ಲ ಕಥೆಗಳ ಕೇಂದ್ರ ಪ್ರೇಮದಲ್ಲಿ, ವಾತ್ಸಲ್ಯದಲ್ಲಿ ಕೂಡ ಸ್ವಾರ್ಥ ಎದ್ದು ಕಾಣುತ್ತದೆ. ಆಸೆ, ಹಕ್ಕು ಬಾಧ್ಯತೆ, ಒಂಟಿ, ಆಯ್ಕೆ, ಕತ್ತಲ ಗರ್ಭದಲ್ಲಿ, ದಟ್ಟ ಗುಂಗುರು ಕೂದಲು, ಹೆದರೋರ್ನ ಕಂಡ್ರೆ, ನಿಮ್ಮ ಮಾವ ಬಂದ್ರಾ, ಪ್ರಾಪ್ತಿ, ಯಶಸ್ಸು, ಹಸಿರು ಎಲೆ ಬಿಳೀ ಅನ್ನ, ಬಟ್ಟಲು ಕಣ್ಗಳ ಕಥೆ, ಸಂಸ್ಕಾರವಿಲ್ಲ ಸೂಳೆ, ಸಂತೆ, ಅಪಾತ್ರರು, ಉಪ್ಪಿನ ಋಣ, ಸೆಕೆಂಡ್ ಇನ್ನಿಂಗ್ಸ್ ಕಥೆಗಳು ಸೇರಿದಂತೆ ನೋಡಿದ್ದು- ಕಾಡಿದ್ದು ಎಂಬ ಕವನವೊಂದಿದೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books