ಪಾರಿಜಾತ (ಸಣ್ಣ ಕಥೆಗಳ ಸಂಕಲನ)

Author : ಎಂ.ಜಿ. ದೇಶಪಾಂಡೆ

Pages 70

₹ 35.00
Year of Publication: 1998
Published by: ಖಡ್ಕೆ ಪತ್ರಿಕೆ ಪ್ರಕಾಶನ
Address: ಉದಗೀರ ರಸ್ತೆ, ಬೀದರ.

Synopsys

ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರು ಬರೆದ ಸಣ್ಣ ಕಥೆಗಳ ಸಂಕಲನ-ಪಾರಿಜಾತ. ಸಾಹಿತಿ ಎಚ್.ಸಿ. ಖಡ್ಕೆ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಪ್ರತಿ ಕಥೆಯೂ ಒಂದು ವೀಶಿಷ್ಟ್ಯುತೆಯನ್ನು ಹೊಂದಿದೆ. ಕಥೆಯ ಅಂಶವು ಚಿತ್ತಾಕರ್ಷಕ ಹಾಗೂ ರಂಜನೀಯವಾಗಿವೆ. ಜೀವನವನ್ನು ಆದರೆ ವಾಸ್ತವದ ನೆಲೆಯಲ್ಲಿಯೇ ಸೂಕ್ಷ್ಮವಾಗಿ ಪರಿಶೀಲಿಸುತ್ತ ಆತ್ಮೀಯವಾಗಿ ಅರ್ಥ ಮಾಡಿಕೊಳ್ಳ ಬಯಸುವ ಸೃಜನಶೀಲ ಸಂವೇದನಾಶೀಲ ಮನಸ್ಸೊಂದು ತನ್ನ ಅನುಭವವನ್ನು ಅನುಭವಕ್ಕೆ ತಕ್ಕ ಭಾಷೆಯಲ್ಲಿ ಹಂಚಿಕೊಳ್ಳುವ ಬಗೆಯನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಆಪ್ತವಾಗಿ ತಿಳಿಸುವ ರೀತಿ ದೇಶಪಾಂಡೆಯವರು ಕತೆಗಳಲ್ಲಿ ಹಾಸುಹೊಕ್ಕಾಗಿ ಸಮ್ಮಿಳಿತವಾಗಿದೆ. ತಾನು ಕಂಡುಂಡ ಜೀವನಾನುಭವಗಳನ್ನೇ ಕಥೆಯನ್ನಾಗಿಸಿ ಕಲೆಗಾರಿಕೆಯ ನಿಲ್ಲುತ್ತ ಧಾಟಿ ಹಿತಮಿತ ಸಂವಾದ ಕಥಾವಸ್ತುವಿನ ಹೊಸತನದಿಂದಾಗಿ ಗಮನ ಸೆಳೆಯುವ ದೇಶಪಾಂಡೆಯವರು ಯಾವುದೇ ವಾದಕ್ಕೆ ಬದ್ಧರಾಗದೆ, ಕಥೆಯಿಂದ ಕಥೆಗೆ ಬೆಳೆಯುತ್ತಾ ಬಂದಿರುವುದನ್ನು ನಾವು ಗಮನಿಸಬಹುದು. ಒಟ್ಟಾರೆ ಪುಟ್ಟ ಕಥೆ ಇದಾಗಿದ್ದು ಪುಟ ತ್ತಿರುವುದರಲ್ಲಿ ಕಥೆ ಮುಗಿದು ಹೋಗುತ್ತದೆ ಆದ್ದರಿಂದ, ಓದುಗರಿಗೆ ಬೇಸರವಾಗದ ಒಟ್ಟು ಐವತ್ತು ಕಥೆಗಳು ಇಲ್ಲಿವೆ . ಗಡಿನಾಡ ಬೀದರ್ ನಲ್ಲಿ ಇಂಥದೊಂದು ಪ್ರಯತ್ನ ನಿಜವಾಗಿಯೂ ಸ್ವಾಗತಾರ್ಹ ಎನ್ನುತ್ತಾರೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books