ಕಳೆದು ಹೋದ ಅಂಬೆಗಾಲು

Author : ಗೌರೀಶ್ ಅಬ್ಳಿಮನೆ

Pages 121

₹ 100.00




Year of Publication: 2022
Published by: ಗೌರೀಶ್ ಅಬ್ಳಿಮನೆ,
Address: ಮೈಲ್ಯಾಂಗ್ ಬುಕ್ಸ್, ಬೆಂಗಳೂರು
Phone: 9591102644

Synopsys

‘ಕಳೆದುಹೋದ ಅಂಬೆಗಾಲು’ ಎಂಬುದು ಲೇಖಕ ಗೌರೀಶ್ ಅಬ್ಳಿಮನೆ ಅವರು ಇ-ಕಥಾ ಸಂಕಲನ. ಒಟ್ಟು 7 ಕಥೆಗಳನ್ನು ಒಳಗೊಂಡಿದೆ. 1.ನಂಟಿನ ಗಂಟು , ಕಥೆಯಲ್ಲಿ, ಅನಿವಾರ್ಯ ಕಾರಣಗಳಿಂದ ತನಗಿಂತ ಕಡಿಮೆ ಶಿಕ್ಷಣ ಪಡೆದ ಶ್ರೀರಾಮ್ ನನ್ನು ಮದುವೆಯಾಗುವ ಇಂಚರಾಳ ದಾಂಪತ್ಯವನ್ನು ಅವರಿಬ್ಬರ  ಶಿಕ್ಷಣ ಮತ್ತು ಉದ್ಯೋಗಗಳು ಕನಸಾಗಿಸಿರುತ್ತವೆ. 2. ಜೋಳಿಗೆಯ ಪುಟ್ಟಿ ಕಥೆಯಲ್ಲಿ, ಪುಟ್ಟಿಗೆ ಅಪ್ಪ ಒಂದು ಮನೆಯಲ್ಲಿ, ಅಮ್ಮ ಒಂದು ಮನೆಯಲ್ಲಿ. ಇಬ್ಬರ ನಡುವೆ ಒಂದು ಕಾಡು, ಅವನ ಕುಡಿತ-ಅವಳ ಅನೈತಿಕ ಸಂಬಂಧ. 3. ಪೋಸ್ಟ್ ಮ್ಯಾನ್ ಎಂಬ ಕಥೆಯಲ್ಲಿ, ಸಾಮಾನ್ಯರು ಬರೆಯುವ ಪತ್ರಗಳಲ್ಲಿ ಅಂತಹ ಮಹತ್ವವಾದ ಜೀವನವನ್ನೇ ಕಷ್ಟಕ್ಕೆ ದೂಡುವಂತಹ ವಿಷಯಗಳೇನಿರುತ್ತವೆ? ಇಷ್ಟಕ್ಕೂ ಅಂತಹ ಒಂದು ಪತ್ರವನ್ನು ಒಬ್ಬ ಕಳ್ಳ ಕದ್ದುಕೊಂಡು ಹೋದರೆ?  ಪೋಸ್ಟ್ ‌ಮ್ಯಾನ್ ಆದವನ ಜವಾಬ್ದಾರಿಯೇನು? 4. ಕಳೆದು ಹೋದ ಅಂಬೆಗಾಲು ಈ ಕಥೆಯಲ್ಲಿ, ಗರ್ಭಿಣಿಯಾದ ಹೆಂಡತಿ ಕೆಲಸಕ್ಕೆ ಹೋದಳೆಂದು‌ ಅವಳನ್ನು ತಿರಸ್ಕರಿಸುವ ಮಟ್ಟಕ್ಕೆ ಜಗಳ ಮಾಡುವ ಗಂಡ ಮಾರನೆಯ ದಿನ ಅವಳು ತನ್ನ ಮಗುವನ್ನು ಕಳೆದುಕೊಂಡಾಗ ಅಹಂನಿಂದ ತನ್ನ ಪ್ರೀತಿಯನ್ನು ಮರೆಯುತ್ತಾನೆಯೇ? ಅಥವಾ  ಬಿಟ್ಟು ಪ್ರೀತಿಯನ್ನು ಮೆರೆಯುತ್ತಾನೆಯೇ? ಎಂಬ ಅಂಶ, 5. ಮನುವಿನ ಕೂಸು ಎಂಬ ಕಥೆಯಲ್ಲಿ,  ಇಂದಿನ ಯಾಂತ್ರಿಕ ಪ್ರಪಂಚಲದಲ್ಲಿ ಮನುಷ್ಯ ಎಷ್ಟೇ ‌ಮುಂದುವರೆದರೂ ಕೆಲಸಗಳಿಗೆ, ಸಮಾಜದ ಪ್ರಗತಿಗೆ ಮನುಷ್ಯನೇ ಬೇಕು, ಮನುಷ್ಯರ ಭಾವನೆಗಳೇ ಬೇಕು. ಪ್ರಗತಿ ಸಂಸ್ಥೆಯಲ್ಲಿ ಒಂದು ಸ್ಥಾನಕ್ಕಾಗಿ ನಡೆಯುವ ರಾಜಕೀಯ ಈ ಸತ್ಯವನ್ನು ತೋರಿಸುತ್ತದೆ. 6. ಕನಸು ಪ್ರಾಡಕ್ಟ್ಸ್ಎಂಬ ಕಥೆಯಲ್ಲಿ, ಒಬ್ಬ ಯುವಕನಿಗೆ ಉದ್ಯೋಗದ ಕನಸು. ಒಬ್ಬ ನಿವೃತ್ತ ಅಧಿಕಾರಿಗೆ ಕವಿಯಾಗಿ ಹೆಸರು ಮಾಡುವ ಕನಸು. ಇಬರಿಬ್ಬರ ಈ ಕನಸುಗಳನ್ನು ಕನಸುಗಳನ್ನು ಹುಡುಕುತ್ತ ಅಂಗಡಿಗೆ ಹೋದ ಒಬ್ಬ ಅನಕ್ಷರಸ್ಥ ಬಾಲಕ‌ ಈಡೇರಿಸುತ್ತಾನೆ. 7. ಬಸ್ಟ್ಯಾಂಡ್ ಪ್ರೇಯಸಿ  ಎಂಬ ಕಥೆಯಲ್ಲಿ, ಅವನಿಗೆ ಚಿನ್ನಿಯೆಂದರೆ ಪ್ರಪಂಚ. ಚಿನ್ನಿಗೆ ಅವನೇ ಪ್ರಪಂಚ. ಇಬ್ಬರ ನಡುವೆ ಇರುವ‌ ಪ್ರೀತಿಯ ಪವಿತ್ರವಾದ ಬಾಂಧವ್ಯಕ್ಕೆ ಕಲ್ಲಾಗಿ ಕೆಲವು ಘಟನೆಗಳು ಬರುತ್ತವೆ. ಅಭಿವೃದ್ಧಿ ಮತ್ತು ವಿರಾಮವಿಲ್ಲದ ಜೀವನ ಹೀಗೆ ವಸ್ತು ವೈವಿಧ್ಯತೆಯ ಕಥೆಗಳನ್ನು ಈ ಸಂಕಲನ ಒಳಗೊಂಡಿದೆ.

About the Author

ಗೌರೀಶ್ ಅಬ್ಳಿಮನೆ
(27 June 1993)

ಲೇಖಕ ಗೌರೀಶ್ ಹೆಗಡೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಹನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಅಬ್ಳಿಮನೆಯವರು. ಇವರ ಕಾವ್ಯನಾಮ-ಗೌರೀಶ್ ಅಬ್ಳಿಮನೆ. (ಜನನ:  27 ಜೂನ್ 1993),  ಹೊನ್ನಾವರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಧಾರವಾಡದ  ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿದರು. ಸದ್ಯ, ಗೋಕರ್ಣದ ತದ್ರಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕಳೆದ ನಾಲ್ಕು ವರ್ಷಗಳಿಂದ ಪ್ರತಿಲಿಪಿ ಕನ್ನಡ ಎಂಬ ಡಿಜಿಟಲ್ ಮಾಧ್ಯಮದಲ್ಲಿ ಕತೆಗಳನ್ನು, ಕವನಗಳನ್ನು ಮತ್ತು ಕಾದಂಬರಿಗಳನ್ನು ರಚಿಸಿ‌ ಪ್ರಕಟಿಸಿದ್ದು, ಇವರ "ಆರದ ದೀಪ" ಎಂಬುದು ಮಹಾ ಕಾದಂಬರಿ, "ಮೂಕನ ಕೋಟೆ", "ಉತ್ತರಾ" ಎಂಬ ಮಹಿಳಾ ...

READ MORE

Related Books