ಶಿಸ್ತು ಮತ್ತು ಇತರ ಕತೆಗಳು

Author : ಶರತ್‍ ಕಲ್ಕೋಡ್

Pages 250

₹ 200.00




Year of Publication: 2020
Published by: ನ್ಯೂ ವೇವ್ ಬುಕ್ಸ್
Address: ಬೆಂಗಳೂರು

Synopsys

‘ಶಿಸ್ತು ಮತ್ತು ಇತರ ಕಥೆಗಳು’ ಕೃತಿಯು ಶರತ್ ಕಲ್ಕೋಡ್ ಅವರ ಕತಾ ಸಂಕಲನವಾಗಿದೆ. ಇಲ್ಲಿನ ಕಥೆಗಳ ಬಹುತೇಕ ಅನುಭವಗಳು ಮಲೆನಾಡು ಮತ್ತು ಬೆಂಗಳೂರು ಎರಡು ಕೇಂದ್ರಗಳಲ್ಲಿ ನಡೆಯುತ್ತವೆ. ಇವೆರಡರಲ್ಲಿ ಮಲೆನಾಡಿನ ಅನುಭಗಳು ಜಾಸ್ತಿಯಾಗಿದ್ದು, ಬೆಂಗಳೂರಿನ ಅನುಭವಗಳು ತುಲನೆಗೆ ಬರುತ್ತಿದೆ. ಕಳೆದುಹೋದ ಅಥವಾ ಕಳೆದುಹೋಗುತ್ತಿರುವ ಮಲೆನಾಡಿನ ಆಪ್ತ ಅನುಭವಗಳ ದಾಖಲೆಯಾಗಿ ಉಳಿಯದೆ, ಆ ಅನುಭವಗಳಲ್ಲೇ ಕತೆಗಳಾಗಿ ಅರಳಿಕೊಂಡಿವೆ. ಇಲ್ಲಿನ ಕತೆಗಳಲ್ಲಿ ಲಲಿತ ಪ್ರಬಂಧಗಳ ನೆರಳು ಕೂಡಾ ಇದೆ. ‘ಮದುವೆ ಎಂಬೊ ಮಾಯಾಬಜಾರ್’ ಕತೆ ಬಹುತೇಕ ಹಳ್ಳಿಗಳಲ್ಲಿ ಹಿಂದೆ ಇದ್ದ ಹಲವಾರು ದಿನಗಳ ಹಾಗೂ  ಒಂದೇ ದಿನದಲ್ಲಿ ಮುಗಿದು ಹೋಗುವ ಮದುವೆಯ ಕಾರ್ಯಕ್ರಮಗಳ ಸ್ವರೂಪವನ್ನೂ ಕಟ್ಟಿಕೊಟ್ಟಿದೆ.

About the Author

ಶರತ್‍ ಕಲ್ಕೋಡ್

ಶರತ್ ಕಲ್ಕೋಡ್ (1946) ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮಗಳೆರಡರಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿರುವವರು, ಮೂಲತಃ ಮಲೆನಾಡಿನವರು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದವರು. 1981ರಲ್ಲಿ ಮಂಗಳೂರಿನ 'ಸಂತೋಷ' ಮಾಸಪತ್ರಿಕೆಯ ಸಂಪಾದಕ ಮಂಡಳಿಗೆ ಸೇರಿ, ಪತ್ರಿಕಾ ಜೀವನವನ್ನು ಆರಂಭಿಸಿದ ಶರತ್ ಕಲ್ಕೋಡ್, ಮುಂದೆ ಮಣಿಪಾಲದ 'ತರಂಗ' ಪತ್ರಿಕೆಯಲ್ಲಿ 9 ವರ್ಷ, ಬೆಂಗಳೂರಿನ 'ಸುಧಾ' - 'ಮಯೂರ' ಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಸುಮಾರು ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಂತರವೂ, “ಉಷಾಕಿರಣ', 'ಓ ಮನಸೇ' ಪತ್ರಿಕೆಗಳಲ್ಲಿ ಕೆಲವು ವರ್ಷ ಕಾರ್ಯನಿರ್ವಹಿಸಿ, ಈಗ ಬರವಣಿಗೆ ಹಾಗೂ ಕೃಷಿಯನ್ನೇ ...

READ MORE

Related Books