ಹಟ್ಟಿಯೆಂಬ ಭೂಮಿಯ ತುಣುಕು

Author : ಲೋಕೇಶ್ ಅಗಸನಕಟ್ಟೆ

Pages 148

₹ 60.00
Year of Publication: 2007
Published by: ಛಂದ ಪುಸ್ತಕ
Address: ಐ-004, ಮಂತ್ರಿಪ್ಯಾರಡೈಸ್‌ ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076
Phone: 9844422782

Synopsys

ಹಟ್ಟಿಯೆಂಬ ಭೂಮಿಯ ತುಣುಕು-ಲೇಖಕ ಲೋಕೇಶ ಅಗಸನಕಟ್ಟೆ ಅವರ ಕಥ ಸಂಕಲನ. ಹಾಸ್ಯದ ಮಿಳಿತದೊಂದಿಗೆ ಜಾತಿ ಮೀಸಲಾತಿ, ಒಳ ಮೀಸಲಾತಿಯ ಹಾಗೂ ಸಾಮಾಜಿಕ ಅವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ ಇಲ್ಲಿಯ ಕತೆಗಳು . ಕೃತಿಗೆ ಆಶಯ ನುಡಿ ಬರೆದಿರುವ ಎಚ್. ಎಸ್. ರಾಘವೇಂದ್ರರಾವ್‌ , “ಒಟ್ಟು ಸಮಾಜವು ಚಲನಚಿತ್ರವೇ ವಿನಾ ಐಡಿಯಾಲಜಿಗಳ ಕನ್ನಡಿಯಲ್ಲಿ ನಿಂತುಹೋಗಿರುವ ಸ್ಥಿರಚಿತ್ರವಲ್ಲವೆಂಬ ಸಂಗತಿಯನ್ನು ಸರಿಯಾಗಿ ಗ್ರಹಿಸಿರುವ ಲೋಕೇಶ್ ಅವರು ಕಾಲದ ಹಕ್ಕಿಯ ರೆಕ್ಕೆ ಬಡಿತಗಳನ್ನು ತಮ್ಮ ಬರವಣಿಗೆಯ ಬೀಸಿನಲ್ಲಿ ಹಿಡಿಯಲು ಯಶಸ್ವಿಯಾಗಿ ಪ್ರಯತ್ನಿಸಿದ್ದಾರೆ. ಒಂದೇ ಹಳ್ಳಿಯ ಚಿತ್ರಭಿತ್ತಿಯ ಮೇಲೆ ಹಲವು ಪಾತ್ರಗಳ ವರ್ಣಪಟಲದಲ್ಲಿ ಹಿಡಿದಿರುವ ಬಿಂಬಗಳು, ಸಾತತ್ಯ ಮತ್ತು ಪರಿವರ್ತನೆಗಳನ್ನು ಒಟ್ಟಿಗೆ ಹಿಡಿಯುವ ಹುನ್ನಾರವಾಗಿ ಬಹಳ ಉಪಯುಕ್ತವಾಗಿದೆ’ ಎಂದು ಕತೆಗಳ ಕುರಿತು ಶ್ಲಾಘಿಸಿದ್ದಾರೆ. ಈ ಕೃತಿಗೆ 2006ರ ಛಂದ ಪುಸ್ತಕ ಬಹುಮಾನ ಸಂದಿದೆ.

About the Author

ಲೋಕೇಶ್ ಅಗಸನಕಟ್ಟೆ
(07 August 1958)

ಡಾ. ಲೋಕೇಶ್ ಅಗಸನಕಟ್ಟೆ ಅವರು ಕವಿ-ಕತೆಗಾರರು. 1958ರ ಆಗಸ್ಟ್ 7ರಂದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಜನಿಸಿದರು. ಅಗಸನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಆನಗೋಡಿನ ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಜಿ.ಚನ್ನಪ್ಪ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಪದವಿ ಮೈಸೂರಿನ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ, ಪಿಹೆಚ್‍ಡಿ ಸಹ ಪಡೆದಿದ್ದಾರೆ.  1986 ರಿಂದ ಮುಂಜಾನೆ ಪತ್ರಿಕೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಅಗಸನಕಟ್ಟೆ,  1984 ರಿಂದ 2017ರವರೆಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸಾಹಿತ್ಯಿಕ ಬರವಣಿಗೆ, ಅಂಕಣ ಬರಹ, ...

READ MORE

Related Books