ಹಕೂನ ಮಟಾಟ

Author : ನಾಗರಾಜ ವಸ್ತಾರೆ

Pages 170

₹ 80.00
Year of Publication: 2007
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ಕವಿ, ಕತೆಗಾರ, ಪ್ರಬಂಧಕಾರ, ವಾಸ್ತುಶಿಲ್ಪಿ ನಾಗರಾಜ ವಸ್ತಾರೆ  ಅವರ ಸಣ್ಣ ಕತೆಗಳ ಸಂಗ್ರಹ ಕೃತಿ ’ಹಾಕೂನ ಮಟಾಟ’.

ಕಳೆದುಕೊಂಡಿರುವ , ಕಳಚಿಕೊಂಡಿರುವ ಅದೆಷ್ಟೋ ಮಾನವ ಸಂಬಂಧಗಳ ಬಗ್ಗೆ ನಾಗರಾಜ ವಸ್ತಾರೆ ಅವರು ತಮ್ಮ ಕತೆಗಳಲ್ಲಿ ವಿಷಾದದಿಂದಲೇ ಚಿತ್ರಿಸುತ್ತಾ ಹೋಗುತ್ತಾರೆ. ಪಾತ್ರಗಳಿಗೆ ಸಂಬಂಧಿಸದ ಹೆಸರುಗಳನ್ನು ನೀಡುತ್ತಾರೆ. ಮನುಷ್ಯ ಸಂಬಂಧಗಳಲ್ಲೇ ಅಂತರ್ಗತವಾಗಿರುವ ದುರಂತವನ್ನು ಪ್ರಸ್ತಾಪಿಸುತ್ತಾ ಕತೆಗಳಲ್ಲಿನ ಪಾತ್ರವರ್ಗವನ್ನು ಸೃಷ್ಟಿಸಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಅಂತರ್‍ ಸಂಬಂಧಗಳು ಮತ್ತು ಅದರ ನೈತಿಕ ಸೂಕ್ಷ್ಮಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.

About the Author

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ...

READ MORE

Related Books