ಎಚ್.ವಿ. ಸಾವಿತ್ರಮ್ಮ ಅವರ ಆಯ್ದ ಕಥೆಗಳು

Author : ಎನ್. ಗಾಯತ್ರಿ

Pages 440

₹ 140.00
Year of Publication: 2014
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು - 560 002

Synopsys

ಶ್ರೀಮತಿ ಎಚ್.ವಿ. ಸಾವಿತ್ರಮ್ಮನವರು ಕೊಡಗಿನ ಗೌರಮ್ಮ, ತಿರುಮಲಾಂಬ, ಶ್ಯಾಮಲಾದೇವಿ, ತಿರುಮಲೆ ರಾಜಮ್ಮ ಮುಂತಾದ ಕನ್ನಡದ ಅಗ್ರಪಂಕ್ತಿಗೆ ಸೇರಿದ ಲೇಖಕಿಯರ ಸಾಲಿನಲ್ಲಿ ನಿಲ್ಲುವಂಥವರು. ಸಮಕಾಲೀನ, ಸಂಪ್ರದಾಯಸ್ಥ ವಿಚಾರಧಾರೆಯ ಜೊತೆಗೆ ಆಧುನಿಕ ವಿಚಾರಧಾರೆಯೊಡನೆಯೂ ಸಹ ಸ್ಪಂದಿಸಿದವರು ಎಚ್.ವಿ. ಸಾವಿತ್ರಮ್ಮನವರು. ಇವರ ಸಾಹಿತ್ಯದಲ್ಲಿ - ಬಾಲ್ಯವಿವಾಹ, ಅವಿಭಕ್ತ ಕುಟುಂಬ ಮುಂತಾದ ಸಾಂಪ್ರದಾಯಕ ಪರಿಸರದಲ್ಲಿದ್ದು, ಶಿಕ್ಷಣಾವಕಾಶದಿಂದ ವಂಚಿತಳಾಗಿದ್ದ ಮಹಿಳೆಯ ಜೀವನ, ಶಿಕ್ಷಿತಳಾದರೂ ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ಉದ್ಯೋಗದತ್ತ ಆಕರ್ಷಿತಳಾಗದಿದ್ದ ಮಹಿಳೆಯ ಜೀವನ ಹೀಗೆ ವಿವಿಧ ಸ್ಥರದ ಮಹಿಳೆಯರ ಜೀವನ ಚಿತ್ರಣವನ್ನು ಕಾಣಬಹುದು.

ಇವರು ನಿರಾಶ್ರಿತೆ, ಮರುಮದುವೆ, ಸರಿದ ಬೆರಳು ಪ್ರತೀಕ್ಷೆ ಲಕ್ಷ್ಮಿ ಮುಂತಾದ ಕಥಾಸಂಕಲನ, ಸೀತೆ-ರಾಮ-ರಾವಣ, ವಿಮುಕ್ತಿ ಎಂಬ ಕಾದಂಬರಿಗಳನ್ನು ನೌಕಾಘಾತ, ಮಹದೇವನ ಜಟಾಜೂಟದಲ್ಲಿ ಗೋರಾ, ಮಧ್ಯಕಾಲದ ಇಂಡಿಯಾ ಮುಂತಾದ ಅನುವಾದ ಕೃತಿಗಳನ್ನು ಪ್ರಕಟಿಸಿರುತ್ತಾರೆ. ಸಣ್ಣ ಕಥೆಗಳ ಅನುವಾದಕ್ಕಾಗಿ 'ಮದುವಣಗಿತ್ತಿ' ಪುಸ್ತಕಕ್ಕೆ ನೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿಗಳು ಇವರಿಗೆ ಸಂದಿರುತ್ತವೆ. ಮಹಿಳಾ ದೃಷ್ಟಿಕೋನದಿಂದ ಕೂಡಿದ ಪ್ರಗತಿಪರ ಲೇಖಕಿಯಾದ ಎಚ್.ವಿ. ಸಾವಿತ್ರಮ್ಮನವರ ಆಯ್ದ ಕಥೆಗಳನ್ನು ಒಟ್ಟು ಗೂಡಿಸಿ ಈ ಕೃತಿಯಲ್ಲಿ ಪ್ರಕಟಿಸಲಾಗಿದೆ. 

About the Author

ಎನ್. ಗಾಯತ್ರಿ

ಲೇಖಕಿ ಡಾ. ಎನ್. ಗಾಯತ್ರಿ ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿದ್ದುಕೊಂಡು  ಸಾಹಿತ್ಯದಲ್ಲಿ ಅಪಾರ ಒಲವುಳ್ಳವರು.  ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಸುದೀರ್ಘ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿರುವ ಅವರು ಕನ್ನಡದಲ್ಲಿ ಸುಮಾರು 15 ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ...

READ MORE

Related Books