ಆತಂತಾತನ ಹೊಸ್ತಾರಿಂಭ

Author : ವಿಜಯಾ ಶ್ರೀಧರ್

Pages 88

₹ 60.00
Year of Publication: 2012
Published by: ಶ್ರೀವಿಜಯ ಪ್ರಕಾಶನ
Address: 6ನೇ ಅಡ್ಡರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ-577 204
Phone: 8182278627

Synopsys

‘ಆತಂತಾತನ ಹೊಸ್ತಾರಿಂಭ’ ಕೃತಿಯು ವಿಜಯಾ ಶ್ರೀಧರ್ ಅವರ ಕಥಾಸಂಕಲನವಾಗಿದೆ. ಈ ಕೃತಿಯೊಳಗಿನ ವಿಚಾರಗಳು ಹೀಗಿವೆ; ಪರಿಸರದೊಡನೆ ಏಕಕಾಲದಲ್ಲಿ ಸಂವಾದಿಸುವ ಶಕ್ತಿ ಹೊಂದಿರುವ ಬೇರು, ಬೇರೆಯವರ ಮನೆಯ ಮದರಂಗಿ ಗಿಡದ ಸೊಪ್ಪಿಗಿಂತ ಅಣ್ಣನ ಮನೆಯಲ್ಲಿ ಬೆಳದ ಮದರಂಗಿ ಕೊಡುವ ಹೆಚ್ಚಿನ ಕೆಂಪು ಬಹು ಎನ್ನುವ ವಿಚಾರ ಒಂದೆಡೆಯಾದರೆ, ಸ್ತ್ರೀವಾದಿ ಎಂದು ಕರೆಸಿಕೊಳ್ಳದ ಸೀತಮ್ಮನೂ ಸಹ ತನ್ನ ಗಂಡನ ಬಳಿ ತನಗೂ ಒಂದು ವೀಕಿನ ನಿವೃತ್ತಿ ಬೇಕು ಎಂದು ದೃಢವಾಗಿ ಹೇಳುವಾಗ ತನಗರಿವಿಲ್ಲದೆ ಸ್ತ್ರೀಪರ ಧ್ವನಿ ಹೊರಗೆ ಬರುತ್ತದೆ. ಮುತ್ತಜ್ಜನ ಶತಮಾನೋತ್ಸವ ಸಂದರ್ಭದಲ್ಲಿ ಎಲ್ಲರೂ ಸಂಭ್ರಮದ ಗಡಿಬಿಡಿಯಲ್ಲಿದ್ದರೆ, ಮುತ್ತಪ್ಪಿ ಸಂಭ್ರಮ ದಲ್ಲಿರಲಿಲ್ಲ..ಹೀಗೆ ಹಳೆಯ ಬೇರುಗಳನ್ನು ಪ್ರೀತಿಸುವುದರ ಸಂಗಡ ಹೊಸ ಚಿಗುರುಗಳನ್ನು ಗೌರವಿಸುವ ಆಪ್ತ ಸಂವೇದನೆಗಳು ಈ ಕೃತಿಯಲ್ಲಿವೆ. 

About the Author

ವಿಜಯಾ ಶ್ರೀಧರ್
(21 September 1949)

ವಿಜಯಾ ಶ್ರೀಧರ ಅವರು ಗಣಿತ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಉತ್ತರ ಕನ್ನಡ ಜಿಲ್ಲೆಯ ಶಿರ್ಶಿಯಲ್ಲಿ 21-09-1949 ರಂದು ಜನಿಸಿದರು. ತಂದೆ ಸದಾಶಿವ ಶಿರೂರ, ತಾಯಿ ಸರೋಜಿನಿ ಶಿರೂರ . ಪ್ರಕಟಿತ ಕೃತಿಗಳು: ಪುಟಾಣಿ ಕಥಾ ಕುಸುಮ (ಮಕ್ಕಳ ಕತೆಗಳು), ಕಳೆದು ಕೊಂಡದ್ದು (ಕಥಾ ಸಂಕಲನ), ಕನ್ನಡಿಯಲ್ಲಿ ಕಂಡಾಗ (ಕಥಾ ಸಂಕಲನ), ನವನೀತ, ಪಯಣ (ಪ್ರವಾಸ ಕಥನ), ಅಜ್ಜನ ಮನೆ ಅಂಗಳದಲ್ಲಿ (ಲಲಿತ ಪ್ರಬಂಧ), ದಶರೂಪ(ಕ)ದ ಸುಬ್ಬಣ್ಣ (ವ್ಯಕ್ತಿ ಚಿತ್ರ), ಹನಿ-ಧ್ವನಿ (ಕವನ ಸಂಕಲನ), ಸುಹಾಸ (ನಗೆ ಲೇಖನಗಳು) ಹಾಸ್ಯ - ಅನುಭವದ ಅಡಿಗೆಯ ಮಾಡಿ (ಲಲಿತ ಪ್ರಬಂಧ) ಅವರ ಸಾಹಿತ್ಯ ಸೇವೆಗೆ ...

READ MORE

Reviews

(ಹೊಸತು, ಮಾರ್ಚ್ 2013, ಪುಸ್ತಕದ ಪರಿಚಯ)

ಮಲೆನಾಡಿನ ನೆಲದಲ್ಲಿ ಆಳವಾಗಿ ಬೇರು ಬಿಟ್ಟಿರುವ ವಿಜಯಾ ಅವರು ತನ್ನ ಪರಪರ ಹಾಗೂ ಈಗಿನ ಪರಿಸರದೊಡನೆ ಏಕಕಾಲದಲ್ಲಿ ಸಂವಾದಿಸುವ ಶಕ್ತಿ ಹೊಂದಿರುವ ಬೇರು, ಬೇರೆಯವರ ಮನೆಯ ಮದರಂಗಿ ಗಿಡದ ಸೊಪ್ಪಿಗಿಂತ ಅಣ್ಣನ ಮನೆಯಲ್ಲಿ ಬೆಳದ ಮದರಂಗಿ ಕೊಡುವ ಹೆಚ್ಚಿನ ಕೆಂಪು ಬಹು. ಆದ್ರೆ ಮದುವೆಯೇ ಬೇಡ ಸಂಸಾರ ಎಷ್ಟು ವರ್ಣಮಯ ನಿಗೂಢ ಸನ್ಯಾಸಿ ಶ್ರೇಷ್ಠನೇ ಆದರೆ ಸಂಸಾರಿಯ ಜೀವನವೇನೂ ಕಮ್ಮಿಯಲ್ಲಿ ರಾಮರಾಯರು ತಮ್ಮ ೬೦ನೇ ಹಂತಿಯ ನಂತರ ಜವಾಬ್ದಾರಿಯನ್ನು ಮಕ್ಕಳ ಹೆಗಲಿಗೆ ಕೊಟ್ಟು ನಿವೃತ್ತಿ ಪಡೆದರು. ಆದರೆ ತಮ್ಮ ಮಡದಿಗೆ ಎಪ್ಪತ್ತಾದರೂ ನಿವೃತ್ತಿಯಿಲ್ಲ ಸ್ತ್ರೀವಾದಿ ಎಂದು ಕರೆಸಿಕೊಳ್ಳದ ಸೀತಮ್ಮನೂ ಸಹ ತನ್ನ ಗಂಡನ ಬಳಿ ತನಗೂ ಒಂದು ವೀಕಿಯ ನಿವೃತ್ತಿ ಬೇಕು ಎಂದು ದೃಢವಾಗಿ ಹೇಳುವಾಗ ತನಗರಿವಿಲ್ಲದೆ ಸ್ತ್ರೀಪರ ಧ್ವನಿ ಹೊರಗೆ ಬರುತ್ತದೆ. ಸತ್ತು ಸಂಪಿಗೆಯಾಗು, ವಿಜಯಾರವರ ಮುಖ್ಯ ಕತೆಗಳಲ್ಲಿ ಒಂದು. ಮೊಮ್ಮಕ್ಕಳು ಬೆಳೆದಂತೆಯೇ ಹೊಸದಾಗಿ ಉಡುಗೊರೆಯಾಗಿ ಬಂದ ಎರಡು ಸಂಪಿಗೆ ಸಸಿಗಳು ಕುಟುಂಬದ ಸದಸ್ಯರಾಗಿಯೇ ಬೆಳೆದದ್ದು ಹಾಗೂ ಅದು ಸಂಸರ ಪ್ರೀತಿಯಾಗಿಯೂ ಕತ್ರ ತುಂಬು ಆವರಿಸಿದೆ. ಮುತ್ತಜ್ಜನ ಶತಮಾನೋತ್ಸವ ಸಂದರ್ಭದಲ್ಲಿ ಎಲ್ಲರೂ ಸಂಭ್ರವಾದ ಗಡಿಬಿಡಿಯಲ್ಲಿದ್ದರೆ, ಮುತ್ತಪ್ಪಿ ಸಂಭ್ರಮ ದಲ್ಲಿರಲಿಲ್ಲ..ನೆನಪಿನ ಓಣಿಯಲ್ಲಿ ಸಾಗುತ್ತ ಅರುವ ಸ್ಥಿತ್ಯಂತರಗಳ ಸಾರ್ಥಕ ಅವಲೋಕನ ಬಳಿದ ಪತ್ನಿಯಿಂದ ಒಂದೊಂದೇ ಆಗಳನ್ನು ಹೆಕ್ಕುವ ಮಧುರ ಕೆಲಸ ಮಾಡುತ್ತಿದ್ದರು. ಪಳೆಯ ಬೇರುಗಳನ್ನು ಪ್ರೀತಿಸುವುದರ ಸಂಗಡ ಹೊಸ ಚಿಗುರುಗಳನ್ನು ಗೌರವಿಸುವ ಆಪ್ತ ಸಂವೇದನೆಗಳು ಇಲ್ಲಿದೆ.

 

Related Books