ತೆರೆದ ಕಣ್ಣುಗಳು

Author : ಬಸವರಾಜ ಹರ್ತಿ ಎಸ್

Pages 74

₹ 40.00




Year of Publication: 2014
Published by: ಯುಕ್ತಪೂರ್ಣ ಪ್ರಕಾಶನ
Address: ಎಂ.ಕೆ. ಪ್ಯಾಲೇಸ್ ಥಿಯೆಟರ್ ಹಿಂಭಾಗ, ರೈಲ್ವೆ ಸ್ಟೇಷನ್ ರಸ್ತೆ, ಸದಾನಂದಯ್ಯ ಬಡಾವಣೆ, ಚಿತ್ರದುರ್ಗ-577 502
Phone: 919036071902

Synopsys

ಲೇಖಕ ಎಸ್. ಬಸವರಾಜ ಹರ್ತಿ  ಅವರ ಕಥೆಗಳ ಸಂಕಲನ-ತೆರೆದ ಕಣ್ಣುಗಳು. ನೇತ್ರದಾನದ ಮಹತ್ವ ಹಾಗೂ ಈ ಕುರಿತು ಜನಮಾನಸದಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಇಲ್ಲಿಯ ಕಥೆಗಳು ರಚಿತಗೊಂಡಿವೆ. 

ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು ಕೃತಿಯ ಕುರಿತು ‘ಈ ಬರಹಗಳು ಅಜ್ಞಾನ. ಅನಕ್ಷರತೆ, ಮೂಢನಂಬಿಕೆಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ಜನಸಾಮಾನ್ಯರ ಬದುಕನ್ನು ಪ್ರತಿಬಿಂಬಿಸುವಂತಿದೆ. ಇವುಗಳಲ್ಲಿ ಸಮಗ್ರ ಜೀವನ ಕಥೆ ಇದೆ. ಜೀವನ ಧರ್ಮ ಅವುಗಳಲ್ಲಿ ರೂಪುಗೊಂಡಿದೆ. ದೇಶ-ಸಮಾಜ-ವ್ಯಕ್ತಿಗಳು ಇವರ ಬರಹ ಚಿಂತನೆಯ ವಸ್ತುಗಳು. ಬರವಣಿಗೆ ಮೂಲಕ ತಮ್ಮ ಅಂತರಂಗದ ಅನುಭೂತಿಯನ್ನು, ಸಾಮಾಜಿಕ ಚಿಂತನೆಗಳನ್ನು ಸಾರ್ಥಕವಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಕವಿ ಬಿ.ಆರ್. ಲಕ್ಷ್ಮಣರಾವ್ ಈ ಕೃತಿಯ ಕುರಿತು ‘ಈ ಕಥಾ ಸಂಕಲನವೊಂದು ವಿಶಿಷ್ಟ ಗಮನಾರ್ಹ ಪ್ರಯೋಗ. ಇಲ್ಲೊಂದು ಸ್ವಾರಸ್ಯಪೂರ್ಣ ಕಥಾನಕವಿದೆ. ಇದರ ಕೇಂದ್ರ ಪಾತ್ರವಾಗಿ ನಮ್ಮ ಹಿಂದಿನ ತಲೆಮಾರಿನ, ಉನ್ನತ ಜೀವನಾದರ್ಶಗಳ, ಮಾನವೀಯ ಮೌಲ್ಯಗಳ ಒಬ್ಬ ನಿವೃತ್ತ ಮೇಷ್ಟ್ರು ಇದ್ದಾರೆ. ಹೊಸ ಪಲ್ಲಟಗಳನ್ನು ಕಂಡ ಸಮಕಾಲೀನ ಬದುಕು ಅವರನ್ನು ದಿಗ್ಭ್ರಾಂತಗೊಳಿಸಿದೆ. ಆದರೆ, ಎದೆಗೆಡಿಸಿಲ್ಲ. ದುಷ್ಟತನಕ್ಕೆ ಸಮಸಮವಾಗಿ ಒಳ್ಳೆಯತನವೂ ಕಂಡು ಭವಿಷ್ಯದ ಬಗ್ಗೆ ಅವರಲ್ಲಿ ಭರವಸೆ ಉಳಿಸಿದೆ. ಜೊತೆಗೆ, ನೇತ್ರದಾನದಂತಹ ಅತ್ಯಗತ್ಯವಾದ, ಸಮಾಜಕ್ಕೆ ಉಪಕಾರಿಯಾದ, ಸತ್ಕಾರ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಲೇಖಕರು ಮುಂದಾಗಿದ್ದಾರೆ’ ಎಂದು ಶ್ಲಾಘಿಸಿದ್ದಾರೆ. 

 

About the Author

ಬಸವರಾಜ ಹರ್ತಿ ಎಸ್
(28 January 1980)

ಲೇಖಕ ಎಸ್. ಬಸವರಾಜ ಹರ್ತಿ ಅವರು ಔಷಧ ವಿಜ್ಞಾನದಲ್ಲಿ ಪದವಿ, ಫಾರ್ಮಾ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ನಂತರ ಕುವೆಂಪು ವಿಶ್ವವಿದ್ಯಾಲಯದಿಂದ (2010) ಡಾಕ್ಟರೇಟ್ ಪದವೀಧರರು. ಚಿತ್ರದುರ್ಗದ ಎಸ್ ಜೆ ಎಂ ಔಷಧ ಮಹಾವಿದ್ಯಾಲಯದ ಫಾರ್ಮ ಕೆಮಿಸ್ಟ್ರಿ ವಿಭಾಗದಲ್ಲಿ  ಸಹಾಯಕ ಪ್ರಾಧ್ಯಾಪಕರು. ಸಂಶೋಧನಾ ಬರಹಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ-ಕವನ ಬರೆಯುವ ಹವ್ಯಾಸ.  ಕೃತಿಗಳು: ತೆರೆದ ಕಣ್ಣುಗಳು (ನೇತ್ರದಾನದ ಅರಿವು-ಮಹತ್ವ ಕೇಂದ್ರಿತ ಬರಹಗಳ ಸಂಕಲನ) ...

READ MORE

Related Books