ಕಪ್ಪುಬಸಿ

Author : ನಜೀರ್ ಮಿಯಾನ್ ಹಟ್ಟಿ

Pages 96

₹ 80.00




Year of Publication: 2019
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಕಲಬುರಗಿ-585101
Phone: 0847222431

Synopsys

ಪತ್ರಕರ್ತ ಹಾಗೂ ಕಥೆಗಾರ ನಜೀರ್ ಮಿಯಾನ್ ಹಟ್ಟಿ ಅವರ ‘ಕಪ್ಪುಬಸಿ ’ ಕಥಾ ಸಂಕಲನದಲ್ಲಿ 12 ಕಥೆಗಳಿವೆ. ಸಂಕಲನ ಶೀರ್ಷಿಕೆಯ ‘ಕಪ್ಪುಬಸಿ’ ಕಥೆಯಲ್ಲಿ ಅಸ್ಪಶ್ಯತೆಯ ಕರಾಳ ಮುಖವನ್ನು ಕಾಣಿಸಿದ್ದು, ಮನುಷ್ಯನ ಕ್ರೌರ್ಯದ ಅನಾವರಣವಿದೆ.

ವಿದ್ಯಾರ್ಥಿ ಜೀವನದಲ್ಲಿಯ ಅನುಭವಗಳನ್ನು ಕಥೆಗಳಾಗಿಸಿರುವ ಲೇಖಕರು, ಪಶ್ಚಾತ್ತಾಪ ಹಾಗೂ ಶೋಷಣೆಯ ಚಿತ್ರಣವಿರುವ ಕಥೆಗಳು ಒಂದೆಡೆಯಾದರೆ ಶಾಂತಿ-ಸಮಾಧಾನವೇ ಜೀವನ, ಸಾರ್ಥಕತೆಯ ಸಂದೇಶ ನೀಡುವ ಕಥೆಗಳು ಹಲವು. ಸರಳ ಭಾಷೆಯಲ್ಲಿ ಕಥೆಗಳು ನಿರೂಪಣೆಯಾಗಿದ್ದು,ಲೇಖಕರ ಸಾಮಾಜಿಕ ಕಳಕಳಿಯು ಕಥೆಗಳ ಮೂಲ ಆಶಯವಾಗಿದೆ. 

 

About the Author

ನಜೀರ್ ಮಿಯಾನ್ ಹಟ್ಟಿ
(12 June 1970)

ರಾಯಚೂರು ಜಿಲ್ಲೆಯ ಹಟ್ಟಿಯ ಚಿನ್ನದ ಗಣಿ ನಜೀರ್ ಮಿಯಾನ್ ಹಟ್ಟಿ ಅವರ ಊರು. 1970ರ ಜೂನ್ 12 ರಂದು ಜನನ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಊರಿನಲ್ಲೇ ಪೂರೈಸಿ, ಬಿ.ಎ. ಪದವಿಯನ್ನು ಧಾರವಾಡದಲ್ಲಿ ಹಾಗೂ ದೂರಶಿಕ್ಷಣ ಮೂಲಕ ಎಂ.ಎ. ಪದವಿ ಪೂರ್ಣಗೊಳಿಸಿದರು. ನಂತರ, ದೂರಶಿಕ್ಷಣ ಮೂಲಕವೇ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ್ದು, ಸಂಜೇವಾಣಿ ಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಓದು ಹಾಗೂ ಕಥಾ ರಚನೆ ಇವರ ಹವ್ಯಾಸ. ...

READ MORE

Related Books