ಹಡೆದವ್ವ

Author : ಸಿ.ಎಸ್. ಆನಂದ

Pages 108

₹ 75.00




Year of Publication: 2010
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯಬೀದಿ, ಕಲಬುರಗಿ-585101
Phone: 9449825431

Synopsys

ಲೇಖಕ ಸಿ.,ಎಸ್. ಆನಂದ ಅವರ ಕಥಾ ಸಂಕಲನ--ಹಡೆದವ್ವ. ಇಲ್ಲಿ 9 ಕಥೆಗಳನ್ನು ಸಂಕಲಿಸಿದೆ. ಬಹುತೇಕ ಕಥೆಗಳು ನಾಡಿನ ವಿವಿಧ ಪ್ರತಿಕೆಗಳಲ್ಲಿ ಪ್ರಕಟವಾಗಿವೆ. ಗುಲಬರ್ಗಾ ಆಕಾಶವಾಣಿ ಕೇಂದ್ರದಿಂದಲೂ ಪ್ರಸಾರವಾಗಿವೆ. ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಪ್ರಾದೇಶಿಕತೆಯು ಇಲ್ಲಿಯ ಬಹುತೇಕ ಕಥೆಗಳಿಗೆ ಜೀವದ್ರವ್ಯವಾಗಿದೆ. 

ಲೇಖಕ ಡಾ. ಎಚ್.ಟಿ.ಪೋತೆ ಅವರು ಕೃತಿಗೆ ಬೆನ್ನುಡಿ ಬರೆದು ‘ಪ್ರತಿ ಕಥೆಯು ಅಂತಃಕರಣ ಕಲುಕುವಂತಿದೆ. ಶೋಷಿತರ ಬದುಕಿನ ಜೀವನೋಲ್ಲಾಸದ ಮೂಲಕವೇ ವರ್ತಮಾನದ ವಿನ್ಯಾಸದಲ್ಲಿ ಮೈ ಪಡೆದಿವೆ. ದೇಸಿಯತೆಯ ತಾಜಾತನವಿದೆ. ಭಾಷೆಯ ಗಟ್ಟಿತನವಿದೆ. ಸುತ್ತಲಿನ ಬದುಕನ್ನು ಸೂಕ್ಷ್ಮ ಸಂವೇದನೆಯಿಂದ ಗಮನಿಸುವ ಕಥೆಗಾರ ಶಕ್ತಿ ಹಾಗೂ ಹೊಯ್ದಾಟಗಳನ್ನು ಕಥೆಗಳಲ್ಲಿ ಕಾಣಬಹುದು ಎಂದು ಪ್ರಶಂಸಿಸಿದ್ದಾರೆ. . 

About the Author

ಸಿ.ಎಸ್. ಆನಂದ

ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು:  ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...

READ MORE

Related Books