ವ್ಯಾಸರಾವ್‌ ನಿಂಜೂರ್‌ ಅವರ ಸಮಗ್ರ ಕತೆಗಳು

Author : ವ್ಯಾಸರಾವ್ ನಿಂಜೂರ್

₹ 595.00




Year of Publication: 2022
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080- 2661 7100

Synopsys

ವ್ಯಾಸರಾವ್‌ ನಿಂಜೂರ್‌ ಅವರ ಸಮಗ್ರ ಕತೆಗಳು ಮಹತ್ವದ ಕಥಾಸಂಕಲನವಾಗಿದೆ. ಜೀವರಸಾಯನ ಶಾಸ್ತ್ರಜ್ಞರಾಗಿ, ಅಣುವಿಜ್ಞಾನಿಯಾಗಿ, ಮುಂಬಯಿಗನಾಗಿ, ಬೆಳೆದ ನಿಂಜೂರರ ಕಥೆಗಳ ಲೋಕವೂ ತನ್ನ ಕಾಣ್ಕೆಯಲ್ಲಿ, ವಿವರಗಳಲ್ಲಿ ವಿಸ್ತಾರದ ಜತೆಗೆ ಧ್ವನಿವಿಸ್ತಾರವನ್ನೂ ಪಡೆಯುತ್ತ ಹೋಗಿದೆ. ಅದ್ಭುತ ಪಾತ್ರ ಚಿತ್ರಣ, ಅನುಭವದಿಂದಲೇ ಬರಬಹುದಾದ ವಾತಾವರಣ ಸೃಷ್ಟಿ, ತೀರ್ಪುಗಾರಿಕೆಯ ತೆವಲಿಲ್ಲದ ಮುಕ್ತ ನೋಟ ಮತ್ತು ನವಿರಾದ ತುಂಟ ವಿನೋದಗಳಿಂದ ಮನವನ್ನು ಕರಗಿಸಿ ಹಿಗ್ಗಿಸಬಲ್ಲ ನಿಂಜೂರರ ಕಥೆಗಳು ದಕ್ಷಿಣ ಕನ್ನಡದ ಗ್ರಾಮ ಮತ್ತು ಮುಂಬಯಿಯ ನಡುವೆ ನಿಗೂಢ ನೈಟ್ ಬಸ್ಸುಗಳಂತೆ ಓಡಾಡುತ್ತಿರುತ್ತವೆ. ಎಷ್ಟೆಲ್ಲ ಅಪ್ಪಟ ಜೀವಿಗಳನ್ನು ತನ್ನಯತೆಯಿಂದ ಕೆಮ್ಮಣ್ಣಿನ ಬೆರಳುಗಳಿಂದ ರೂಪಿಸುವ ನಿಂಜೂರರ ಕಥೆಗಾರಿಕೆ, ಕಳೆದ ಆರು ದಶಕಗಳಲ್ಲಿ ಬಂದು ಹೋದ ಕನ್ನಡದ ವಿವಿಧ ಸಾಹಿತ್ಯಕ ಚಳುವಳಿಗಳ ಮೇಲುಸ್ತರದ ಪ್ರಭಾವಗಳಿಗೆ ಆಮಿಷಗಳಿಗೆ ಕಿಂಚಿತ್ತೂ ಬಲಿಯಾಗದೇ, ತನ್ನದೇ ಆದ ಗಟ್ಟಿ ಒಳನೋಟಕ್ಕೆ ಮುಕ್ತ ಜೀವನ ದರ್ಶನಕ್ಕೆ ಪಕ್ಕಾಗುತ್ತ ಬಂದ ರೀತಿ ಹೃದ್ಯವಾಗಿದೆ. ಎಂದು ಪುಸ್ತಕದ ಬೆನ್ನುಡಿ ಯಲ್ಲಿ ಜಯಂತ ಕಾಯ್ಕಿಣಿ ಅವರು ತಿಳಿಸಿದ್ದಾರೆ.

About the Author

ವ್ಯಾಸರಾವ್ ನಿಂಜೂರ್
(06 October 1940)

ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ಪಡೆದ ಅವರು, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನೂ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು.  ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಅವರು, ನಂತರ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ...

READ MORE

Related Books