ಸಮಕಾಲೀನ ಸಣ್ಣಕತೆಗಳು

Author : ಬಿ.ಸಿ. ರಾಮಚಂದ್ರ ಶರ್ಮ

Pages 388

₹ 95.00




Year of Publication: 1999
Published by: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
Address: ಎ-೫ ಗ್ರೀನ್ ಪಾರ್ಕ್‌‌, ನವದೆಹಲಿ-೧೧೦೦೧೬

Synopsys

ಕನ್ನಡದ ಆಧುನಿಕ ೩೦ ಕತೆಗಾರರ ಕಥೆಗಳು ಸೇರಿರುವ ಪ್ರಾತಿನಿಧಿಕ ಸಂಕಲನ ಇದು. ಈ ಸಂಕಲನಕ್ಕೆ ಬರೆದ ಪ್ರಸ್ತಾವನೆಯಲ್ಲಿ ರಾಮಚಂದ್ರ ಶರ್ಮ ಅವರು, ಆಗಲೇ ದೈತ್ಯ ಪ್ರತಿಭೆಗಳು ಇಲ್ಲವಾಗುತ್ತಿರುವ ಬಗ್ಗೆ ಹೇಳಿದ್ದಾರೆ. ನವೋದಯ ಹಾಗೂ ನವ್ಯ ಮಾರ್ಗದ ಆರಂಭದ ದಿನಗಳಲ್ಲಿ ಧುತ್ತನೆ ಪ್ರತ್ಯಕ್ಷವಾದ ದೈತ್ಯ ಪ್ರತಿಭೆಗಳಿಗೆ ಸಾಟಿಯಾಗಬಲ್ಲ ಕಥೆಗಾರರು ಇವೊತ್ತು ಕಾಣುತ್ತಿಲ್ಲ. ಯುವ ಬರಹಗಾರರಿಗೆ ಮಾರ್ಗದರ್ಶನ ಸಿಗುತ್ತಿಲ್ಲ ಅನ್ನುವುದೂ ಕಾರಣವಾಗಿರಬಹುದು ಎಂದು ಅವರು ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಸಂಕಲನಕ್ಕೂ ಮುಂಚೆ ೧೯೭೮ರಲ್ಲಿ ವಿಮರ್ಶಕ ಜಿ ಎಚ್ ನಾಯಕರ ಸಂಪಾದಕತ್ವದಲ್ಲಿ ಬಂದ ಕನ್ನಡ ಸಣ್ನ ಕತೆಗಳು ಸಂಕಲನಕ್ಕೆ ಇದು ಸಂವಾದಿಯೆಂದು ಕೂಡ ರಾಮಚಂದ್ರ ಶರ್ಮ ಅವರೇ ಹೇಳಿಕೊಂಡಿದ್ದಾರೆ.

About the Author

ಬಿ.ಸಿ. ರಾಮಚಂದ್ರ ಶರ್ಮ
(28 November 1925 - 18 April 2005)

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ  1925ರ ನವೆಂಬರ್ 28ರಂದು ಜನಿಸಿದ ಕವಿ  ಡಾ. ಬಿ.ಸಿ.ರಾಮಚಂದ್ರ ಶರ್ಮ ಅವರು ನವ್ಯ ಸಾಹಿತ್ಯ ಕಾಲ ಘಟ್ಟದ ಪ್ರಮುಖ ಲೇಖಕರಲ್ಲಿ ಒಬ್ಬರು. ನವೋದಯ ಮತ್ತು ಪ್ರಗತಿಶೀಲ ಚಳವಳಿಯ ಸಣ್ಣ ಕಥೆಗಳಿಗಿಂತ ಭಿನ್ನವಾದ ಹೊಸ ಸಂವೇದನೆಯ ಕಥೆಗಳನ್ನು ರಚಿಸಿದವರು. ಕನ್ನಡದ ಮೊತ್ತಮೊದಲ ನವ್ಯ ಕಥೆಗಾರ ಎಂದು ಗುರುತಿಸುವಷ್ಟರ ಮಟ್ಟಿಗೆ ಅವರ ಕಥೆಗಳ ಸಾಹಿತ್ಯದ ಧೋರಣೆ ವಿಶಿಷ್ಟವಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಚಿಕವೀರರಾಜೇಂದ್ರ' ಕಾದಂಬರಿಯನ್ನು ಇಂಗ್ಲಿಷ್‌ಗೆ ಶರ್ಮ ಅನುವಾದಿಸಿದ್ದರು. ಈ ಶತಮಾನದ ನೂರು ಇಂಗ್ಲಿಷ್ ಕವನಗಳು ಹಾಗೂ ಹಲವು ಕಥೆಗಳನ್ನು ಅವರು ಕನ್ನಡಕ್ಕೆ ...

READ MORE

Related Books