ನವ್ವಾಲೆ ಬಂತಪ್ಪ ನವ್ವಾಲೆ

Author : ಕಂನಾಡಿಗಾ ನಾರಾಯಣ

Pages 332

₹ 250.00




Year of Publication: 2018
Published by: ಕಂನಾ ಪುಸ್ತಕ
Address: `ಸೃಜನಾ’, 3 ನೇ ಕ್ರಾಸ್, ಹೆಸರಘಟ್ಟ ಮುಖ್ಯ ರಸ್ತೆ, 8 ನೇ ಮೈಲಿ, ದಾಸರಹಳ್ಳಿ ಬೆಂಗಳೂರು- 560057
Phone: 9880220505

Synopsys

ಬದುಕನ್ನು ನೋಡುವ ಎರಡು ವಿಭಿನ್ನ ಮನೋಭಾವಗಳನ್ನು ಇಲ್ಲಿ ಕಾಣಬಹುದಾಗಿದೆ. ಕರಿಯನಂತಹ ಹಂದಿ, ಛತ್ರಿ ಚಂಬಸಯ್ಯ, ಹಾವು ಹಿಡಿಯುವ ದುಂಡಣ್ಣ... ಹೀಗೆ ಇವರೆಲ್ಲರ ಬದುಕು ದುರಂತಮಯವಾಗಿರುವುದು ಈ ದೇಶದ ಸಾಮಾಜಿಕ ನ್ಯಾಯವನ್ನು ಸೂಚಿಸುತ್ತದೆ. ಕಂನಾಡಿಗ ಅವರ ಆಯ್ದ ಕತೆಗಳ ಸಂಕಲನ ‘ನವ್ವಾಲೆ ಬಂತಪ್ಪ ನವ್ವಾಲೆ’.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books